ಬೆಳಗಾವಿ:ಸದಾ ಸಮಾಜಮುಖಿ ಕಾರ್ಯ ಮಾಡಿಕೊಂಡು ಬರುತ್ತಿರುವ ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ರಾಜಧಾನಿ ಬೆಂಗಳೂರಿನ ಯಶವಂತಪುರ ನಗರದಲ್ಲಿರುವ ಸುಪ್ರಸಿದ್ಧ ಹನುಮಂತ ದೇವಸ್ಥಾನದ ಸುತ್ತಲಿನ ಮರಗಳಲ್ಲಿ ಬಿಟ್ಟು ಹೋದ ಮುಕ್ಕಾದ ದೇವರ ಫೋಟೋಗಳನ್ನು ತಂದು ಬೆಳಗಾವಿಯಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಿದರು.
ಹಿಂದು ಧರ್ಮದಲ್ಲಿ ದೇವರುಗಳಿಗೆ ಪ್ರಥಮ ಆದ್ಯತೆಯನ್ನು
ನೀಡಲಾಗುತ್ತದೆ. ಬೆಳಗಾವಿಯಲ್ಲಿ ದೇವರ ಫೋಟೋಗಳನ್ನು ಸಂಗ್ರಹಿಸಿ ವಿಸರ್ಜನೆ ಮಾಡುವುದನ್ನು ಗಮನಿಸಿದ್ದ ಜರನು ವೀರೇಶ ಬಸಯ್ಯ ಹಿರೇಮಠ ಅವರಿಗೆ ಬೆಂಗಳೂರಿನ ಅಭಿಮಾನಿಗಳು ಕರೆ ಮಾಡಿ ಮುಕ್ಕಾದ ದೇವರ ಫೋಟೋಗಳನ್ನು ಸಂಗ್ರಹಿಸಿಕೊಂಡು ಹೋಗುವಂತೆ ಮನವಿ ಮಾಡಿದ್ದರು. ತಡಮಾಡದೆ ವೀರೇಶ ಬಸಯ್ಯ ಹಿರೇಮಠ ಬೆಂಗಳೂರಿಗೆ ತೆರಳಿ ಯಶವಂತಪುರ ಹನುಮಂತ ದೇವಸ್ಥಾನದ ಸುತ್ತಮುತ್ತಲಿನ ಮುಕ್ಕಾದ ಪೋಟೋ ಸಂಗ್ರಹಿಸಿಕೊಂಡಿ ಬಂದು ಬೆಳಗಾವಿಯಲ್ಲಿ ವಿಸರ್ಜನೆ ಮಾಡಿದರು.
ಈ ಸಂದರ್ಭದಲ್ಲಿ ಡಾ. ಐ.ಡಿ.ಹಿರೇಮಠ, ಯಲ್ಲಪ್ಪಾ ಚೌವ್ಹಾಣ, ಗೌರೀಶ್ ಹಿರೇಮಠ, ಡಾ.ಸುಧೀರ ಉಣನೊಡೆ ಮತ್ತು ಹನುಮಂತ ದೇವಸ್ಥಾನದ ಭಕ್ತರು ಭಾಗಿಯಾಗಿದ್ದರು