ಒಂದು ವೇಳೆ ಒಡಂಬಡಿಕೆ ಆಗಿದ್ರೆ ಡಿಕೆಶಿಗೆ ಹೈಕಮಾಂಡ್ ಸಿಎಂ ಸ್ಥಾನ ನೀಡಲಿ ಎಂದು ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ ಚನ್ನಸಿದ್ಧರಾಮ ಶ್ರೀಗಳು ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಅವರು ಇಂದು ಬಾಗಲಕೋಟೆ ಜಿಲ್ಲೆಯ ಅಮೀನಗಢದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಶ್ರೀಗಳು, “ಸರ್ಕಾರ ರಚನೆಯ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಯಾವ ಒಡಂಬಡಿಕೆಯನ್ನು ಮಾಡಿಕೊಂಡಿತ್ತೋ ಗೊತ್ತಿಲ್ಲ. ಆದರೆ, ಒಡಂಬಡಿಕೆ ನಡೆದಿದ್ದರೆ, ಹೈಕಮಾಂಡ್ ಅದನ್ನು ಗೌರವಿಸಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. , ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರೂ ಸಹ ಮುತ್ಸದ್ದಿ ಹಾಗೂ ಅನುಭವಜ್ಞ ರಾಜಕಾರಣಿಗಳು ಎಂದ ಅವರು, “ಅವರು ಮುಖ್ಯಮಂತ್ರಿಯ ಸ್ಥಾನಕ್ಕಾಗಿ ಜಗಳವಾಡದೇ, ರಾಜ್ಯದ ಅಭಿವೃದ್ಧಿಗೆ ಗಮನ ಹರಿಸಬೇಕು” ಎಂದು ಸಲಹೆ ನೀಡಿದರು.
ಇನ್ನು ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆಗಳನ್ನು ಅವರು ತೀವ್ರವಾಗಿ ಖಂಡಿಸಿದರು. “ಅಮಾಯಕ ಹಿಂದೂಗಳ ಹತ್ಯೆಗಳು ನಿಜಕ್ಕೂ ನೋವಿನ ಸಂಗತಿ. ಭಾರತ ಹಲವು ಧರ್ಮ, ಸಂಪ್ರದಾಯಗಳ ಸಾಂಸ್ಕೃತಿಕ ದೇಶ. ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವುದು ಸರ್ವಥಾ ಖಂಡನೀಯ. ಯಾವ ಧರ್ಮವೂ ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂದರು.