Chikkodi

ನಿಪ್ಪಾಣಿಯಲ್ಲಿ ಐದು ಜನರಿಗೆ ಹುಚ್ಚು ನಾಯಿ ಕಡಿತ,ಬಿಚ್ಚಿ ಬಿದ್ದ ಜನ

Share

ಚಿಕ್ಕೋಡಿ:ಹುಚ್ಚು ನಾಯಿಯೊಂದು ಐದು ಜನರಿಗೆ ಕಚ್ಚಿದಂತ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ.

ಇವತ್ತು ನಿಪ್ಪಾಣಿ ಪಟ್ಟಣದ ಚಾಂದಖಾನ,ಮಗದುಮ ಗಲ್ಲಿ ಯಲ್ಲಿ ಹುಚ್ಚು ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಪರಿಣಾಮ ಇವತ್ತು ಮೂವರು ಮಹಿಳೆಯರಿಗೆ ಹಾಗೂ 2 ಬಾಲಕರಿಗೆ ಹುಚ್ಚು ನಾಯಿ‌ ಕಚ್ಚಿ ಗಾಯಮಾಡಿದೆ.ಗಾಯಾಳುಗಳು ಸಮೀಪದ ಆಸ್ಪತ್ರೆಯಲ್ಲಿ ‌ಚಿಕಿತ್ಸೆಯನ್ನು‌ ಪಡೆದುಕೊಳ್ಳುತ್ತಿದ್ದಾರೆ.

ನಿಪ್ಪಾಣಿ ಪಟ್ಟಣದಲ್ಲಿ ದೀಪನಾಯಿಗಳ ಕಾಟ ಹೆಚ್ಚಾಗುತ್ತಿದೆ. ಇದು ಜನರಲ್ಲಿ ಭಯದ ವಾತಾವರಣನ್ನು ನಿರ್ಮಾಣ ಮಾಡಿದೆ.
ಈ ಬಗ್ಗೆ ನಗರಸಭೆ ಗಮನಕ್ಕೆ ಇದ್ರೂ ಯಾವುದೇ ಕ್ರಮ ಕೈಮಕೈಗೊಳ್ಲುತ್ತಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ.

ಒಟ್ಟಿನಲ್ಲಿ ಹುಚ್ಚ ನಾಯಿಗಳ ಹಾವಳಿಯಿಂದ ನಿಪ್ಪಾಣಿ ಜನರು ಭಯಭೀತರಾಗಿದ್ದು,ಕೂಡಲೇ ನಗರಸಭೆಯ ಅಧಿಕಾರಿಗಳು ಎಚ್ಚೆತ್ತಕೊಂಡು ಹುಚ್ಚನಾಯಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಜನರ ಆಗ್ರಹವಾಗಿದೆ.

Tags:

error: Content is protected !!