Bagalkot

ಜಮೀನಿನ ದಾರಿ ವಿಚಾರಕ್ಕೆ ಕುಟುಂಬಸ್ಥರ ನಡುವೆ ಮಾರಾಮಾರಿ

Share

ಹುಟ್ಟುತ್ತ ಅಣ್ಣತಂದಿರು ಬೆಳೆಯುತ್ತ ದಾಯಾದಿಗಳು ಎನ್ನುವ ಮಾತು ಸುಳ್ಳಲ್ಲ. ಒಂದೇ ರಕ್ತ ಹಂಚಿಕೊಂಡು ಹುಟ್ಟಿದ್ರು, ಬೆಳೆಯುತ್ತಿದ್ದಂತೆ ಆಸ್ತಿಗಾಗಿ ಕಲಹ ತಪ್ಪಿದ್ದಲ್ಲ. ಅಂತಹದ್ದೇ ಒಂದು ದೊಡ್ಡ ಕುಟುಂಬದಲ್ಲಿ ಕೇವಲ ಜಮೀನಿನಲ್ಲಿ ಹೋಗುವ ದಾರಿಗಾಗಿ ಮಾರಾಮಾರಿ ನಡೆದಿದೆ. ಅಣ್ಣ ತಂಗಿ, ಮಾವ ಅಳಿಯ ಹೀಗೆ ರಕ್ತ ಸಂಬಂಧಿಗಳೇ ಕೈಯಲ್ಲಿ ಕೊಡಲಿ ಕುಡುಗೋಲು ಹಿಡಿದು ಬಡಿದಾಡಿದ್ದಾರೆ..

GFX….

ಜಮೀನಿನ ದಾರಿ ವಿಚಾರಕ್ಕೆ ಕುಟುಂದ ಸದಸ್ಯರಲ್ಲೇ ನಡುವೆ ಮಾರಾಮಾರಿ..

ಕೊಡಲಿ ಕೊಡಗುಲು ಕಟ್ಟಿಗೆಯಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು..

ಕುಟುಂಬಗಳ ನಡುವಿನ ಮಾರಾಮಾರಿ  ದೃಶ್ಯ ಮೊಬೈಲ್ ನಲ್ಲಿ ಸೆರೆ..

ಸ್ವತಃ ಮಗನ ಕುಟುಂಬದ ಮೇಲೆ ತಂದೆ ತಾಯಿ ಅಕ್ಕ ತಂಗಿ ಹಾಗೂ ಸಂಬಂಧಿಗಳಿಂದ ಹಲ್ಲೆ..

ಮೇವು ತೆಗೆದುಕೊಂಡು ಬರುವಾಗ ಶುರುವಾದ ದಾರಿ ಜಗಳ..  ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಶುರುವಾಗೇ ಬಿಡ್ತು ಹೊಡೆದಾಟ, ಬಡಿದಾಟ. ಕೈಯಲ್ಲಿ ಕುಡುಗೋಲು, ಕೊಡಳಿ ಹಿಡಿದು ಮಾರಣಾಂತಿಕ ಹಲ್ಲೆ.. ಸ್ವಂತ ಮಗನ ಕುಟುಂಬ ಎನ್ನುವುದನ್ನು ಲೆಕ್ಕಿಸದೆ ಹಲ್ಲೆ ಮಾಡ್ತಿರೋ ತಂದೆ ತಾಯಿ, ಅಕ್ಕ,ತಂಗಿ…

ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸನಾಳ ಗ್ರಾಮದಲ್ಲಿ.  ಹೌದು, ಸಂಬಂಧಿಕರ ನಡುವಿನ ಆಸ್ತಿ ಕಲಹಕ್ಕೆ ಎಷ್ಟೋ ಜೀವಗಳು ಬಲಿಯಾಗಿದ್ದು ನೋಡಿದ್ದೇವೆ. ಇದು ಕೂಡ ಅಂತಹದ್ದೇ ಪ್ರಕರಣ. ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀರೋ ಇವರು ಅಲ್ಲಾಸಾಬ ಲಾಲಸಾಬ ನದಾಫ್ ವಯಸ್ಸು 46, ಪಕ್ಕದಲ್ಲಿರೋ ಇವರು ಅಲ್ಲಾಸಾಬನ ಹೆಂಡತಿ, ಮಗ ಸೊಸೆ. ನಿನ್ನೆ ಸಂಜೆ  ಬೇರೆ ರೈತರ ಜಮೀನಲ್ಲಿ ಮೇವು ಮಾಡಿಕೊಂಡು ಮನೆಗೆ ಬರುವಾಗ ತನ್ನ ತಂದೆಯ ಜಮೀನಿನಲ್ಲಿ ಹಾದು ಹೋಗಿದ್ದಕ್ಕೆ ಸ್ವಂತ ತಂಗಿಯೇ ನಮ್ಮ ಹೊಲದಲ್ಲಿ ಯಾಕೆ ಹಾಯ್ತಿಯಾ ಎಂದು ಜಗಳ ಶುರು ಮಾಡಿದ್ದಳಂತೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಪಕ್ಕದಲ್ಲೇ ಇದ್ದ ಎರಡು ಕುಟುಂಬಸ್ಥರು ಓಡಿ ಬಂದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ರಕ್ತ ಹಂಚಿಕೊಂಡು ಹುಟ್ಟಿದವನು ಎಂದು ಲೆಕ್ಕಿಸದೆ  ಅಲ್ಲಾಸಾಬ ಹಾಗೂ ಆತನ ಹೆಂಡತಿ, ಮಗ, ಸೊಸೆಯ ಮೇಲೆ, ಸ್ವತಃ ತಂದೆ, ತಾಯಿ, ತಂಗಿ, ಅಕ್ಕ, ಮಾವ, ಅಳಿಯಂದಿರು ಸೇರಿದಂತೆ 10 ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.  ಕುಡುಗೋಲು, ಕೊಡಲಿ, ಕಟ್ಟಿಗೆಯಿಂದ ಹಲ್ಲೆಗೊಳಗಾದ,  ತಸ್ಮಿಯಾ ನದಾಫ್, , ಫಾತಿಮಾ ನದಾಫ್, , ರಮಜಾನ್ ನದಾಫ್,  ಆಸ್ಮಾ ನದಾಫ್, ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಟುಂಬದಲ್ಲಿ ಭಿನ್ನಾಭಿಪ್ರಾಯದಿಂದ ಅಲ್ಲಾಸಾಬ, ತನ್ನ ತಂದೆ ಹೆಸರಿನಲ್ಲಿ ಇರೋ 1 ಎಕರೆ 2 ಗುಂಟೆ ಜಮೀನನ್ನು ತಂದೆ-ತಾಯಿಗೆ ಬಿಟ್ಟಿಕೊಟ್ಟು, ತಾನು ಗ್ರಾಮದ ಜಾಕ್ ವೆಲ್ ಬಳಿ ಶೆಡ್ ಹಾಕಿಕೊಂಡು ಹೆಂಡಿತಿ ಮಕ್ಕಳೊಂದಿಗೆ ವಾಸಿಸುತ್ತಿದ್ದಾನೆ. ತಂಗಿಯನ್ನ ಮದುವೆ ಮಾಡಿಕೊಟ್ಟ ಬಳಿಕ ಆಕೆ ಗಂಡ ತೀರಿಕೊಂಡಿದ್ದ. ಹೀಗಾಗಿ ಆಕೆ ತಂದೆತಾಯಿಯೊಂದಿಗೆ ಸನಾಳ ಗ್ರಾಮದಲ್ಲೇ ಇದ್ದಾಳೆ. ತನಗೆ ಜಮೀನಲ್ಲಿ ಶೆಡ್ ಹಕೈಕೊಳ್ಳಲು ಅಲ್ಲಾಸಾಬ ಜಾಗ್ ಕೇಳಿದ್ದಕ್ಕೆ ಆಗಾಗ್ಗೆ ಗಲಾಟೆ ನಡೀತಿತ್ತು. ಎಷ್ಟೇ ಬೇಡಿಕೊಂಡ್ರು ತಂದೆ ತಾಯಿ ತಂಗಿ ಈತನಿಗೆ ಜಾಗ ಕೊಟ್ಟಿರಲಿಲ್ಲ. ಬದಲಿಗೆ ಇದೇ ವೈಷಮ್ಯ ತಾರಕಕ್ಕೆ ಏರಿತ್ತು. ಹೀಗಾಗಿ ತಮ್ಮ ಜಮೀನಿನಲ್ಲಿ ಅಣ್ಣನಿಗೆ ಓಡಾಡೋದಕ್ಕೂ ಬಿಡುತ್ತಿರಲಿಲ್ಲ. ನಿನ್ನೆ ಅಚಾನಕ್ಕಾಗಿ ಹೊಲದಲ್ಲಿ ಹೋಗಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಘಟಣೆಗೆ ಸಂಬಂಧಿಸಿದಂತೆ, ಮಹಮ್ಮದ್ ನದಾಫ್, ಸಲೀಮ್ ನದಾಫ್, ಹಾಜಿಸಾಬ್ ನದಾಫ್, ಲಾಲ್ ಸಾಬ್ ನದಾಫ್, ಕುಲ್ಸುಮಾ ನದಾಫ್, ಜೈಬೂನ್ ನದಾಫ್, ಜೈತುನಬಿ ನದಾಫ್, ಹೀನಾ ನದಾಫ್, ರಾಜ್ಮಾ ನದಾಫ್, ಅಣ್ಣಾಸಾಬ್ ನದಾಫ್ ವಿರುದ್ಧ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ ಐಅರ್ ದಾಖಲಾಗಿದೆ.

ಒಟ್ಟಿನಲ್ಲಿ ಆಸ್ತಿ ಅಂತಸ್ತಿಗಾಗಿ ದಾಯಾದಿಗಳಲ್ಲಿ ಕಲಹ ಉಂಟಾಗುತ್ತೆ ಎನ್ನುವ ಹಿರಿಯ ಮಾತಿನಂತೆ. ಜಮೀನಿನ ದಾರಿ ಗಾಗಿ ಒಂದೇ ಸದಸ್ಯರು  ಹೊಡೆದಾಡಿಕೊಂಡಿರೋದು ವಿಪರ್ಯಾಸ.

Tags:

error: Content is protected !!