ರಾಜ್ಯದಲ್ಲಿ ಏನೂ ಅರಿಯದ ಅತ್ಯಂತ ಮುಗ್ಧ ರಾಜಕಾರಣಿ ಎಂದರೇ ಅದು ಡಿಸಿಎಂ ಡಿ.ಕೆ.ಶಿವಕುಮಾರ್ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದರು. ಶಾಸಕ ಕೆ.ಎನ್. ರಾಜಣ್ಣ ಸ್ವಯಂಪ್ರೇರಿತರಾಗಿ ಒಂದು ಘಟನೆಯನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಸಿಓಡಿ ತನಿಖೆಗೆ ಆಗ್ರಹಿಸಿತ್ತು. ಆದರೇ, ಸಾಕ್ಷಿ ಪುರಾವೆಗಳ ಅಭಾವದಿಂದ ಈಗ ಈ ಪ್ರಕರಣವನ್ನು ಕೈ ಬಿಡುತ್ತಿದ್ದಾರೆ. ಸರ್ಕಾರದ ಆಂತರೀಕ ಕಚ್ಚಾಟ ಹೊರ ಬರದಂತೆ ಹೈ ಕಮಾಂಡ್ ಒತ್ತಡಕ್ಕೆ ಮಣಿದು, ಈ ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರನ್ನು ರಕ್ಷಿಸದಿದ್ದರೇ, ಕೇಂದ್ರದ ಕಾಂಗ್ರೆಸ್ ಮುಖಂಡರಿಗೆ ದೊಡ್ಡ ಭಯ ಉಂಟಾಗಲಿದೆ. ಕೆ.ಎನ್. ರಾಜಣ್ಣ ಅವರಿಗೆ ಈ ಪ್ರಕರಣದಿಂದ ಹಿಂದಕ್ಕೆ ಸರಿಯಲು ಡಿಸಿಎಂ ಪಟ್ಟದ ಆಮೀಷವನ್ನು ಕೂಡ ತೋರಿಸಬಹುದು ಎಂದರು.

ಇನ್ನು ಈ ತನಿಖೆ ಬಗ್ಗೆ ತಮಗೆ ಯಾವುದೇ ಮಾಹಿತಿಯೇ ಇಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಗೆ ತಿರುಗೇಟು ನೀಡಿದ ಅವರು, ಯಾವ ವಿಚಾರದಲ್ಲಿಯೂ ಡಿಕೆ ಶಿವಕುಮಾರಗೆ ಏನು ಗೊತ್ತೇ ಇರುವುದಿಲ್ಲ. ರಾಜ್ಯದಲ್ಲಿ ಅವರು ಅತ್ಯಂತ ಮುಗ್ಧ ಏನು ಗೊತ್ತಿಲ್ಲದ ರಾಜಕಾರಣಿ ಎಂದರು.
ಇನ್ನು ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ಈ ಸಂಸ್ಕೃತಿಯನ್ನು ತಳೆದಿದ್ದೇ ಕಾಂಗ್ರೆಸ್. ತಮ್ಮ ಸೋಲು ತಮ್ಮ ತಪ್ಪನ್ನು ಮರೆ ಮಾಚಲು ಇಂತಹ ಅಪಪ್ರಚಾರವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆಮದರು.
