ಬೆಳಗಾವಿ ಜಿಲ್ಲೆಯ ಹಿರೇ ಬಾಗೇವಾಡಿ ತಾಲೂಕಿನ ತಿಗಡಿ ವಲಯದ ಜಕ್ಕನಾಕನಕೊಪ್ಪ ಕಾರ್ಯಕ್ಷೇತ್ರದಲ್ಲಿ ಒಕ್ಕೂಟದ ಸಭೆ ಹಾಗೂ ಬಸವೇಶ್ವರ ದೇವಸ್ಥಾನದ 3 ಲಕ್ಷ ರೂಪಾಯಿ ಅನುದಾನದ ಚಕ್ ವಿತರಣೆ ಕಾರ್ಯಕ್ರಮ ನಡೆಯಿತು
ಈ ಕಾರ್ಯಕ್ರಮಕ್ಕೆ ಸಭೆಯ ಅಧ್ಯಕ್ಷರಾದ ಪ್ರಕಾಶ್ ಮಾವಿನಕಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುರೇಶ್ ಚಿಕ್ಕಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಡಿಒ ಐ ಬಿ ಅಂಗಡಿ ಹಾಗೂ ಮಾನ್ಯ ಯೋಜನಾಧಿಕಾರಿಗಳಾದ ಯೋಗೇಶ್ ಹಾಗೂ ಇದೇ ಕಾರ್ಯಕ್ರಮವನ್ನು ಉದ್ದೇಶಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು ಹಾಗೂ ಮೇಲ್ವಿಚಾರಕರಾದ ಹಾಲಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳೆದುಬಂದ ದಾರಿ ಬಗ್ಗೆ ಜನರಿಗೆ ಮಾಹಿತಿ ನೀಡಿದರು
ಇದೇ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಪ್ರೀತಿ ಗುಂಡ್ಲೂರ್ ಸೇವಾ ಪ್ರತಿನಿಧಿಗಳಾದ ಗೀತಾ ಮತ್ತು ವಿಜಯಲಕ್ಷ್ಮಿ ಜೋಳದ ಹಾಗೂ ಗ್ರಾಮದ ಹಿರಿಯ ಗ್ರಾಮಸ್ಥರು ಸಂಘಗಳ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು ಧರ್ಮಸ್ಥಳ ಗ್ರಾಮಾಭಿವೃದ್ಧಿಯ 4 ಯೋಜನೆಗಳ ಹೊಂದಿದ್ದು ಅವುಗಳ ಬಗ್ಗೆ ಯೋಜನಾಧಿಕಾರಿ ಸಂಪೂರ್ಣವಾಗಿ ಮಾಹಿತಿಯನ್ನು ಜನರಿಗೆ ತಿಳಿಹೇಳಿದರು
ವರದಿಗಾರು
ಶಾನೂಲ ಮತ್ತೆಖಾನ
ಬೈಲಹೊಂಗಲ