Delhi

ಚರ್ಚೆ ಅಪೂರ್ಣ; ಜುಲೈ 16ಕ್ಕೆ ಸುರ್ಜೆವಾಲಾ ಮತ್ತೇ ರಾಜ್ಯಕ್ಕೆ ಬರ್ತಾರೆ; ಸಿಎಂ ಸಿದ್ಧರಾಮಯ್ಯ

Share

ಇಂದು ದೆಹಲಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರನ್ನು ಭೇಟಿಯಾದ ಸಿಎಂ ಸಿದ್ಧರಾಮಯ್ಯ ಜುಲೈ 16 ರಂದು ಬೆಂಗಳೂರಿಗೆ ಮತ್ತೇ ಸುರ್ಜೆವಾಲಾ ಆಗಮಿಸಿ, ನಿಗಮ ಮಂಡಳ ಅಧ್ಯಕ್ಷ ನೇಮಕದ ಕುರಿತು ಅಂತಿಮ ನಿರ್ಣಯ ಪ್ರಕಟಿಸಲಿದ್ದಾರೆ ಎಂದರು.

ದೆಹಲಿಯಲ್ಲಿ ಇಂದು ಸಿಎಂ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರನ್ನು ಭೇಟಿಯಾದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು , ಬಾಕಿಯುಳಿದಿರುವ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ವಿಷಯವನ್ನು ಸುರ್ಜೇವಾಲಾ ಅವರೊಂದಿಗೆ ಚರ್ಚಿಸಲಾಯಿತು, ಅದರೆ ಚರ್ಚೆ ಅಪೂರ್ಣವಾಗಿದೆ; ಹಾಗಾಗೇ ಅವರು ಜುಲೈ 16 ರಂದು ಪುನಃ ಬೆಂಗಳೂರಿಗೆ ಬರಲಿದ್ದಾರೆ, ಅವರ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷರ ಹೆಸರುಗಳನ್ನು ಅಂತಿಮಗೊಳಿಸಲಾಗುವುದು ಎಂದರು.

Tags:

error: Content is protected !!