Belagavi

ಧನಂಜಯ ಜಾಧವ್ ಮಿತ್ರ ಪರಿವಾರದಿಂದ ಚಾರಣ…ವೃಕ್ಷಾರೋಪಣದೊಂದಿಗೆ ಪರಿಸರ ಸ್ವಚ್ಛತೆ

Share

ಪ್ರತಿ ವರ್ಷದಂತೆ ಈ ವರ್ಷವೂ ಧನಂಜಯ ಜಾಧವ್ ಮಿತ್ರ ಪರಿವಾರದ ವತಿಯಿಂದ ಪ್ರಕೃತಿಯ ರಮಣೀಯ ಸೌಂದರ್ಯವನ್ನು ನೋಡಲು ಒಂದು ದಿನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.

ಮಹಾರಾಷ್ಟ್ರದಲ್ಲಿಯ ಚಂದಗಡ್ ತಾಲೂಕಿನ ಪಾಠನೇಯ ಹತ್ತಿರವಿರುವ ಜೇಳುಗಡೆ ಊರಿನಲ್ಲಿರುವ ಅರಣ್ಯ ಪ್ರದೇಶದಲ್ಲಿರುವ ದಟ್ಟ ಕಾಡಿನೊಳಗೆ ಜಲಪಾತವನ್ನು ನೋಡಿ ಎಲ್ಲ ಕಾರ್ಯಕರ್ತರು ಈ ಪ್ರಕೃತಿಯ ಸೌಂದರ್ಯವನ್ನು ಆನಂದಿಸಿದರು. ಇಲ್ಲಿ ತಲುಪಲು ಎಲ್ಲರೂ ಸುಮಾರು ಎರಡು ಕಿಲೋಮೀಟರ್ ಕಾಲ್ನಡಿಗೆಯಿಂದ ತಲುಪಿದರು. ಹಾಗೂ ಪಾಠನೇಯ ಗ್ರಾಮದಲ್ಲಿರುವ ಶಾಲೆಯಲ್ಲಿ ವೃಕ್ಷಾರೋಪಣ ಹಾಗೂ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು . ಈ ಶಾಲೆಯ ಆವರಣದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಎಲ್ಲ ವ್ಯವಸ್ಥೆಯನ್ನು ಕಾರ್ಯಕರ್ತರೆಲ್ಲರೂ ಅಚ್ಚುಕಟ್ಟಾಗಿ ಮಾಡಿದ್ದರು.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಚಂದಗಡ ತಾಲೂಕಿನ ಸಮಾಜ ಸೇವಕರು ಆದ ಶ್ರೀ ಸದಾನಂದ ಸೀತಾಫ ಹಾಗೂ ಅವರ ಸಹಕಾರಿಗಳೊಂದಿಗೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವರ್ಗ ಸಹಕಾರ ದೊರೆಯಿತು.
ಈ ಪ್ರವಾಸದಲ್ಲಿ ಬೆಳಗಾವಿ ತಾಲೂಕು ಹಾಗೂ ನಗರದಿಂದ 200 ಕಾರ್ಯಕರ್ತರು ಆಗಮಿಸಿದ್ದರು.

Tags:

error: Content is protected !!