ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಇವರು ಕ್ಷೇತ್ರದ ಬೇರೆ ಬೇರೆ 13 ಗ್ರಾಮಗಳಲ್ಲಿ ವಿವಿಧ ಸಮಾಜದ ದೇವರ ಮಂದಿರಗಳು ಹಾಗೂ ಭವನಗಳು ನಿರ್ಮಿಸಲು 2.40 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನಿರ್ವಹಿಸಿದರು.
ಶನಿವಾರ ರಂದು ಶಾಸಕರಾಜು ಕಾಗೆ ಇವರು ಬೆಳಗ್ಗೆ ಮಂಗಾವತಿ, ಜುಗುಳ, ಶಹಾಪುರ, ಮೋಳವಾಡ, ಕುಸನಾಳ, ಉಗಾರ
ಬಿ ಕೆ, ಫರಿದಕಾನವಾಡಿ, ಮಂಗ್ಸುಳಿ ಗ್ರಾಮಗಳಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದರು.
ಶಾಸಕ ರಾಜು ಕಾಗೆ ಮಾತನಾಡಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 13 ಕೋಟಿ ರೂಪಾಯಿ ವೆಚ್ಚದಲ್ಲಿ ಬೇರೆ ಬೇರೆ ಗ್ರಾಮಗಳಲ್ಲಿ 70 ಸಮುದಾಯ ಭವನ ಕಟ್ಟಡ ನಿರ್ಮಿಸಲು ಅನುದಾನ ನೀಡಲಾಗಿದೆ. ಈ ಕಟ್ಟಡಗಳು ಸುಸ್ತಜಿತವಾಗಿ ನಿರ್ಮಿಸಲು ಸ್ಥಳೀಯ ಮುಖಂಡರು ಗಮನಹರಿಸಬೇಕು ಎಂದು ಹೇಳಿ. ಬಸವೇಶ್ವರ ಎತ ನೀರಾವರಿ ಯೋಜನೆ ಪ್ರಾರಂಭಿಸಿ ಇದರಿಂದ ಅನೇಕ ರೈತರಿಗೆ ಸಹಕಾರವಾಗಿದೆ, ಸದ್ಯಕ್ಕೆ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಈ ನೀರು ರೈತರಿಗೆ ಅನುಕೂಲವಾಗಿದೆ, ಕೆರೆ ತುಂಬುವ ಯೋಜನೆ, ಶೀಘ್ರದಲ್ಲಿ ಪ್ರಾರಂಭಿಸಿ ರೈತರ ಗದ್ದೆಗಳಿಗೆ ನೀರ್ಹರಿಸಲಾಗುವುದು ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಪೂಜಾರಿ ಮಾತನಾಡಿ ಶಾಸಕ ರಾಜು ಕಾಗೆ ಒಬ್ಬ ಧೀಮಂತ ನಾಯಕರು ಅವರು ಮಂಗಸುಳಿ ಗ್ರಾಮಕ್ಕೆ ನೀರಾವರಿ ನೀರು ಹರಿಸಿದರಿಂದ ಅನೇಕ ರೈತರ ಜೀವನ ಉದ್ದಾರವಾಗಿದೆ. ಕಳೆದ ಅನೇಕ ವರ್ಷಗಳಿಂದ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ನಮ್ಮ ಪಾಲಿಗೆ ಒಬ್ಬ ಧೀಮಂತ ನಾಯಕರು ಲಭಿಸಿದ್ದಾರೆ ನಮಗೆ ಹೆಮ್ಮೆ ಇದೆ ಎಂದು ಹೇಳಿ. ಮತಕ್ಷೇತ್ರದ ಮಾಜಿ ತಹಶೀಲ್ದಾರ್ ರಾಜೇಶ್ ಬುರ್ಲಿ ಹಾಗೂ ಜಯಾನಂದ ಹಿರೇಮಠ, ವೀರಣ್ಣ ವಾಲಿ ಮೂರು ಅಧಿಕಾರಿಗಳು ತ್ರಿಮೂರ್ತಿ ಎಂತೆ ಲಬ್ಬಿಸಿದರು ಅವರಿಂದ ಕ್ಷೇತ್ರದ ಅಭಿವೃದ್ಧಿ ಆಗಿದೆ ಎಂದು ಎದೆ ತಟ್ಟಿ ಹೇಳುತ್ತೇನೆ ಎಂದು ರವೀಂದ್ರ ಪೂಜಾರಿ ಹೇಳಿದರು.
ಮಂಗಾವತಿ ಕಾರ್ಯಕ್ರಮದಲ್ಲಿ ರಾಜೇಗೌಡ ಪಾಟೀಲ, ಗಿರೀಶ್ ಪಾಟೀಲ್ ಅಪ್ಪಾಸಾಹೇಬ್ ತೊಬರೆ, ಕೆ ಆರ್ ಪಾಟೀಲ, ಜುಗುಳ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಅನ್ನಾಸಾಹೇಬ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಕಾ ಪಾಟೀಲ್, ಅನಿಲ್ ಕರೋಲೆ, ಉಗಾರರ ಮಹಾದೇವ್ ಕಟಗೇರಿ, ವೀರಭದ್ರ ಕಟಗೇರಿ, ರವೀಂದ್ರ ಪೂಜಾರಿ, ಬಾಳು ಬಜಂತ್ರಿ, ಮುಕುಂದ ಪೂಜಾರಿ, ಎಲ್ಲ ಚುನಾಯಿತ ಸದಸ್ಯರು, ಗುತ್ತಿಗೆದಾರರಾದ, ಸುನಿಲ್ ಅವಟಿ, ಸಿಲೆದಾರ್ ಕಾಂಬಳೆ, ಅನಿಲ್ ಸತ್ತಿ ಸೋಮ್ರಾಜ್ ಪಾಟೀಲ್ ಸುನಿಲ್ ಪಾಟೀಲ್
, ಕುಸನಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ನಾದನಿ ಚಿದಾನಂದ ಅಥಣಿ ರಾಜು ದುಗ್ಗೆ, ಮುಳವಾಡ, ಫರಿದ್ಖಾನ್ವಾಡಿ ಮಂಕದ ಮುಖಂಡರು ಇದ್ದರು.
ಸುಕುಮಾರ್ ಬನ್ನೂರೆ
ಇನ ನ್ಯೂಸ್ ಕಾಗವಾಡ