ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಕೊಂಡಗುಳಿ ಗ್ರಾಮಕ್ಕೆ ಹೈಸ್ಕೂಲು ಬೇಕೆಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ದೂರದ ದೇವರ ಹಿಪ್ಪರಗಿ ಅಥವಾ ತಾಳಿಕೋಟೆಗೆ ಹೋಗುತ್ತಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳು ಹೈಸ್ಕೂಲ್ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ.
ಆದಷ್ಟು ಬೇಗ ಕೊಂಡಗುಳಿ ಗ್ರಾಮದಲ್ಲಿ ಹೈಸ್ಕೂಲು ಮಂಜೂರು ಮಾಡಿ ಅನಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಮ್ಮ ಗ್ರಾಮಕ್ಕೆ ಹೈಸ್ಕೂಲ್ ಮಂಜೂರು ಮಾಡ ಬೇಕು ಇದರಿಂದ ಸುತ್ತ ಮುತ್ತಲಿನ ಐದಾರು ಹಳ್ಳಿಗಳಿಗಳ ವಿದ್ಯಾರ್ಥಿಗಳಿಗೆ ಅನಕೂಲವಾಗಲಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ…