Bagalkot

12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಸೈಕಲ್ ಯಾತ್ರೆ

Share

12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಬಾಗಲಕೋಟೆಯ ಯುವಕ ಸೈಕಲ್ ಏರಿ ಹೊರಟಿದ್ದು, ಎಂ.ಲ್.ಸಿ ಪಿ.ಎಚ್. ಪುಜಾರ್ ಯುವಕನ ಸೈಕಲ್ ಯಾತ್ರೆಗೆ ಚಾಲನೆ ನೀಡಿ, ಶುಭ ಹಾರೈಸಿದ್ದಾರೆ.

ಬಾಗಲಕೋಟೆ ನಗರದ ಯುವಕ ಪೃಥ್ವಿ ಅಂಬಿಗೇರ್ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ಮಹತ್ವಾಕಾಂಕ್ಷಿಯ ಸೈಕಲ್ ಯಾತ್ರೆಗೆ ಹೊರಡಿದ್ದಾರೆ. ಸಾವಿರಾರು ಕಿಲೋಮೀಟರ್ ದೂರವಿರುವ ಜ್ಯೋತಿರ್ಲಿಂಗ ಸ್ಥಳಗಳಿಗೆ ಸೈಕಲ್ ಮೂಲಕ ಪ್ರವಾಸ ಮಾಡುವ ಸಾಹಸಿಕ ನಿರ್ಧಾರ ಕೈಗೊಂಡಿದ್ದಾನೆ. ಪೃಥ್ವಿಗೆ ಆರತಿ ಬೆಳಗಿ, ತಿಲಕವಿಟ್ಟು ಶುಭಾಶಯಗಳೊಂದಿಗೆ ಬೀಳ್ಕೊಟ್ಟರು. ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಪಯಣಕ್ಕೆ ಬಾಗಲಕೋಟೆಯ ಎಂ ಎಲ್ ಸಿ ಪಿ.ಎಚ್ .ಪೂಜಾರ್ ಚಾಲನೆ ನೀಡಿ ಶುಭಹಾರೈಸಿದರು. ಪೃಥ್ವಿಯ ಸಾಹಸ ಯಾತ್ರೆಯು ಧರ್ಮ, ಶ್ರದ್ಧೆ ಮತ್ತು ದೈವಭಕ್ತಿಯ ಸಂಕೇತವಾಗಿದ್ದು, “ಅವನ ಪವಿತ್ರ ಪ್ರಯಾಣದಿಂದ ನಮಗೂ ಪುಣ್ಯ ಸಿಗಲಿ” ಎಂದು ಅವರು ಹಾರೈಸಿದರು.

Tags:

error: Content is protected !!