ಚಿಕ್ಕೋಡಿ: ಅಂಕಲಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ದೆಹಲಿ ಪ್ರತಿನಿಧಿ ಹಾಗೂ ವಿ.ಪ.ಸದಸ್ಯ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿಯವರು ಪ್ರಯತ್ನದಿಂದ 1.90 ಕೋಟಿ ರೂ ಅನುದಾನ ಮಂಜೂರು ಆಗಿದೆ ಯುವ ಕಾಂಗ್ರೆಸ್ ಮುಖಂಡ,ಗ್ರಾ.ಪಂ ಸದಸ್ಯ ವಿಕ್ರಮ ಶಿರಶೇಟ ಹೇಳಿದರು.
ಅಂಕಲಿ ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಅಂಕಲಿ-ಸೌಂದತ್ತಿ ಮುಖ್ಯ ರಸ್ತೆಯಿಂದ ರೇಣುಕಾ ಎಲೆಕ್ಟ್ರಾನಿಕ್ ಅಂಗಡಿವರೆಗೆ 50 ಲಕ್ಷ ರೂ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ (ಸಿ.ಸಿ.) ರಸ್ತೆ, ಮಯೂರ ಚಿತ್ರ ಮಂದಿರದಿಂದ ಸರ್ಜೆರಾವ್ ನಗರದ ಪ್ರಮುಖ ದ್ವಾರದವರೆಗೆ, ಪೊಲೀಸ್ ಠಾಣೆಯವರೆಗೆ ಹಾಗೂ ವಾರ್ಡ್ ನಂ. 1, 2 ಮತ್ತು 3ರಲ್ಲಿ ರಸ್ತೆ ಡಾಂಬರೀಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ 1.40 ಕೋಟಿ ರೂ ಅನುದಾನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಬಳಿಕ ಅಶ್ವತ ಶಿತೋಳೆಯವರು ಮಾತನಾಡಿ ಈ ಅಭಿವೃದ್ಧಿ ಯೋಜನೆಗಳಿಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಅವರ ನಿರಂತರ ಪ್ರಯತ್ನದಿಂದ ಅನುದಾನ ಮಂಜೂರಾಗಿದೆ. ಅಂಕಲಿ ಗ್ರಾಮವು ಇದೀಗ ಬೆಳವಣಿಗೆಯ ಪಥದಲ್ಲಿ ಸಾಗುತ್ತಿದೆ. ಇಂತಹ ಮಹತ್ವದ ಯೋಜನೆಗಳನ್ನು ಗ್ರಾಮಕ್ಕೆ ತರಲು ಸಹಕಾರ ನೀಡಿದ ನಾಯಕರಿಗೆ ಗ್ರಾಮಸ್ಥರ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
ಈ ಸಂಧರ್ಭದಲ್ಲಿ ಸುರೇಶ ಕೋರೆ,ರಂಜಿತ ಶೀರಶೆಟ್, ಪಾಂಡು ವಡ್ಡರ, ಕುಮಾರ ಬುಬನಾಳೆ, ಅಭಿಷೇಕ ಕೋರೆ, ಶಿವಾಜಿ ಕೋಠಿವಾಲೆ, ಸಂತೋಷ ಮಠದ, ಜಗದೀಶ ಪಾಟೀಲ, ಸುನೀಲ ಕೋರೆ, ರಾಜು ಗುಂಡಕಲ್ಲೆ ಚಂದು ಕುರೆ,ಗುತಿಗೆದಾರ ರವಿ ಮಾಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.