ಗೋರಕ್ಷಕರ ಮೇಲಿನ ಹಲ್ಲೆಯನ್ನುಖಂಡಿಸಿ ಜುಲೈ 3 ರಂದು ಹುಕ್ಕೇರಿ ತಾಲೂಕಿನ ಇಂಗಳಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇತ್ತಿಚೆಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ವಾಹನದಲ್ಲಿ ಗೋವುಗಳನ್ನು ಸಾಗಿಸುತ್ತಿರುವುದನ್ನು ತಡೆಹಿಡಿಯಲು ಹೋದಾಗ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಇದೇ ಗುರುವಾರ ಬೃಹತ ಸಂಖ್ಯೆಯಲ್ಲಿ ಇಂಗಳಿ ಚಲೋ ಕಾರ್ಯಕ್ರಮವನ್ನು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀರಾಮ ಸೇನೆಯ ಕಾರ್ಯಕರ್ತರು ಅವರ ಮನೆ ಒಳ್ಳೆಗೆ ನುಗ್ಗಿಲ್ಲ, ಮನೆ ಹೋರಗಡೆ ನೀಂತು ಮಾತನಾಡಿದ್ದಾರೆ. ಅಲ್ಲಿ ಮಾತನಾಡುತ್ತಿರುವ ದೃಶ್ಯಗಳನ್ನು ಸಹ ಸೇರೆ ಹಿಡಿಯಲಾಗಿದೆ. ಆಕಳನ್ನು ತುಂಬಿಕೊಂಡು ಹೋಗುತ್ತಿರುವುದನ್ನು ಹುಕ್ಕೇರಿ ಪೋಲಿಸ ಠಾಣೆಯಿಂದ ಫಾಲೋ ಮಾಡಲಾಗಿರುವ ವಿಡಿಯೋಗಳ್ಳನ್ನು ಗಂಗಾಧರ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಹುಕ್ಕೇರಿ ಪೋಲಿಸ ಠಾಣೆಗೆ 30 ಸಾವಿರ ಹಣ ನೀಡಿ ಆಕಳುಗಳನ್ನು ಬಿಡಿಸಿಕೊಂಡು ಬಂದಿದ್ದೇನೆಂದು ಮಹಿಳೆ ಹೇಳಿದ್ದಾಳೆ. ಹುಕ್ಕೇರಿ ಪೋಲಿಸ ಠಾಣೆಯಿಂದ ಜೂನ 26ರಂದು ಸರ್ಕಾರಿ ಗೋಶಾಲೆಗೆ ಯಾಕೇ ಕಳುಹಿಸಿದ್ದಿರಿ. ಅಲ್ಲಿ ವ್ಯವಸ್ಥೆ ಸರಿಯಾಗಿಲ್ಲೆಂದು ಜೂನ 28 ರಂದು ಬಿಡುಗಡೆ ಮಾಡಿ ಕಳುಹಿಸಿದ್ದಿರಿ. ಆಕಳುಗಳನ್ನು ಮಾಲಿಕರಿಗೆ ಹಸ್ತಾಂತರ ಮಾಡುತ್ತಿದ್ದೇವೆಂದು ಯಾವುದೇ ದಾಖಲೆಗಳ್ಳಿಲ್ಲ ಎಂದರು.
ವಿಠ್ಠಲ ದಡ್ಡಿ, ವಿನಯ ಹಳ್ಳೂರಿ, ರವಿ ಕೋಕಿತ್ಕರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.