ಭೀಕರ ಬರ ಪೀಡಿತ ಜಿಲ್ಲೆ ಅಂತಾ ಹಣೆ ಪಟ್ಟಿ ಕಟ್ಟಿಕೊಂಡ ಜಿಲ್ಲೆ ವಿಜಯಪುರ ಜಿಲ್ಲೆ. ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಇಂಡಿ ಪಟ್ಟಣದ ಪೊಲೀಸ್ ಪೆರೇಡ್ ಮೈದಾನದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಹಾಗೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಕಾರ್ಯಕ್ರಮದ ಲ್ಲಿ ಹಲವು ಜನ ಸಚಿವರು ಶಾಸಕರು ಪಾಲ್ಗೊಂಡಿದ್ದರು. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…
ಹೌದು ಬರ ಪೀಡಿತ ಜಿಲ್ಲೆ ಅಂತಾ ಹಣೆ ಪಟ್ಟಿ ಕಟ್ಟಿ ಕೊಂಡ ಜಿಲ್ಲೆ ವಿಜಯಪುರ, ಬರ ಪೀಡಿತ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಸಿಎಂ ಡಿಸಿಎಂ ಚಾಲನೆ ನೀಡಿದರು. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪೊಲೀಸ್ ಪೆರೇಡ್ ಮೈದಾನದಲ್ಲಿ 4500 ಕೋಟಿಗೂ ಅಧಿಕ ಮೌಲ್ಯದ ವಿವಿಧ ಕಾಮಗಾರಿಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ವೇದಿಕೆ ಮೇಲೆ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ 35 ವರ್ಷಗಳ ರಾಜಕೀಯ ಜೀವನ ಹಾಗೂ ಅಭಿವೃದ್ದಿ ಕಾರ್ಯಗಳ ಬಗ್ಗೆ ಭಾಷಣ ಮಾಡಿದರು. ನೀರಾವರಿ ಯೋಜನೆಗಳು ಸಿದ್ದೇಶ್ವರ ಸ್ವಾಮೀಜಿಗಳಿಗೆ ಸಮರ್ಪಣೆ ಮಾಡುತ್ತೇವೆ. ಸಂಗನ ಬಸವ ಸ್ವಾಮೀಗಳಿಗೆ ಶೈಕ್ಷಣಿಕ ಯೋಜನೆ ಅರ್ಪಿಸುತ್ತೇವೆ.
2018-19 ರಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಬಜೆಟ್ ನಲ್ಲಿ ಅನುಮೋದನೆಯಾಗಿದೆ. ಮೊದಲ ಹಂತ, 2 ನೇ ಹಾಗೂ 3 ನೇ ಹಂತದ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ 3100 ಕೋಟಿ ರೂಪಾಯಿ ನೀಡಲಾಗುತ್ತಿದೆ. ಮುಳವಾಡ ನೀರಾವರಿ ಯೋಜನೆ ವಿಸ್ತೀರ್ಣತೆ ಮಾಡಲಾಗುತ್ತಿದೆ. ಬರಗಾಲ ಜಿಲ್ಲೆಯೆಂದು ಖ್ಯಾತಿ ಪಡೆದ ಜಿಲ್ಲೆಯ ಈ ಭಾಗಕ್ಕೆ ನೀರಾವರಿ ಯೋಜನೆ ಅಭಿವೃದ್ದಿ ಮಾಡಿದ್ದಕ್ಕೆ ಸಿಎಂ ಹಾಗೂ ಡಿಸಿಎಂಗೆ ಈ ಭಾಗದ ಜನರು ಋಣಿಯಾಗಿರುತ್ತಾರೆ ಎಂದರು. 3800 ಕೋಟಿ ನೀರಾವರಿ ಯೋಜನೆಗಳು, ಪಿಡ್ಲ್ಯೂಡಿ ಯೋಜನೆಗೆ 314 ಕೋಟಿ ಕಾಮಗಾರಿ ಮಾಡಲಾಗುತ್ತಿದೆ. ಭೀಮಾನದಿಗೆ ಪಡಗಾನೂರ ಉಟಗಿ ಗ್ರಾಮದ ಬಳಿ 65 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ.
30 ಕೋಟಿ ವೆಚ್ಚದಲ್ಲಿ ಶೀ ಸಿದ್ದೇಶ್ವರ ಮಹಾಸ್ವಾಮೀಜಿ ಮೆಗಾ ಮಾರ್ಕೆಟ್ ಲೋಕಾರ್ಪನೆ ಮಾಡಿದ್ದೇವೆ ಇನ್ನೂ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ ಎಂದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಬಂದ ತಕ್ಷಣ ಯಶವಂತರಾಯಗೌಡ ಪಾಟೀಲ ಅವರು ಒಂದು ನಿಂಬೆ ಹಣ್ಣನ್ನು ಕೊಟ್ಟಿದ್ದಾರೆ. ಎಲ್ಲ ಹುಳಿಗಳಲ್ಲಿ ಶೇಷ್ಟವಾದದ್ದು ನಿಂಬೆ ಹುಳಿ. ನಿಂಬೆ ಪೂಜೆಗೂ, ದೃಷ್ಟಿ ಗೂ, ಊಟಕ್ಕೂ, ಮನುಷ್ಯನ ಶುದ್ದಿಗೂ ಉಪಯೋಗ ಮಾಡುತ್ತೇವೆ ಅಂತಹ ತಾಲೂಕು ಇಂಡಿ ತಾಲೂಕು. ನಾನು ಎರಡನೇ ಬಾರಿ ನೀರಾವರಿ ಸಚಿವನಾದ ಮೇಲೆ ನಾನು ಸಿಎಂ ಯಾವ ಕ್ಷೇತ್ರಕ್ಕೂ ಇಷ್ಟೊಂದು ದೊಡ್ಡ ಹಣ ಕೊಡಲಿಲ್ಲ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಅಭಿವೃದ್ಧಿ ಗೆ ಹಣ ಕೇಳಿದ ತಕ್ಷಣ ಕೊಟ್ಟಿದ್ದೇವೆ. ಹೊರ್ತಿ ರೇವಣಸಿದ್ದೇಶ್ವರ, ತಿಡಗುಂದಿ ಶಾಖಾ ಕಾಲುವೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ, ನಿಮ್ಮ ಆಶಿರ್ವಾದ ಕಾಂಗ್ರೆಸ್ ಸರ್ಕಾರದ ಮೇಲೆ ಇರಲೇ ಬೇಕು, ಮತ್ತೆ 2028 ರ ಚುನಾವಣೆ ವೇಳೆ ನಾವು ಜಿಲ್ಲೆಯಲ್ಲಿ ಕಳೆದು ಕೊಂಡ ಎರಡು ಕ್ಷೇತ್ರ ಗೆಲ್ಲಿಸಿ ಕೊಡಬೇಕು ಎಂದ ಡಿಸಿಎಂ ಡಿ ಕೆ ಶಿವಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು…
ಇನ್ನೂ ಇದೇ ವೇಳೆ ವೇದಿಕೆಯ ಮೇಲೆ ಮಾತನಾಡಿದ ಸಿಎಂ ಸಿದ್ದರಾಮಯ್ಯಇವತ್ತು ಇಂಡಿ ಹಾಗೂ ನಾಗಠಾಣ ಮತಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ದಲ್ಲಿ ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿರುವೆ. ಇದೊಂದು ಐತಿಹಾಸಿಕವಾದ ದಿನ. ಸುಮಾರು 4559 ಕೋಟಿ ರೂಪಾಯಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಇವತ್ತು ಚಾಲನೆ ನೀಡಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮ ಆಗಲು ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ವಿಠಲ ಕಟಕದೊಂಡ ಕಾರಣ. ನಾನು ಇಂಡಿಗೆ ಬಹಳ ಬಾರಿ ಬಂದಿರುವೆ. ನೀವೇಲ್ಲರೂ ನನ್ನ ಮನವಿಗೆ ಓಗೊಟ್ಟು ಯಶವಂತರಾಯಗೌಡ ಪಾಟೀಲ ಹಾಗೂ ವಿಠಲ ಕಟಕದೊಂಡ ಅವರಿಗೆ ಗೆಲ್ಲಿಸಿದ್ದಕ್ಕೆ ನಿಮಗೆ ನಮಸ್ಕಾರಗಳು. ಮುಂದಿನ ವಿಧಾನಸಭಾ ಚುನಾವಣಯಲ್ಲಿ ನಮಗೆ ಆಶಿರ್ವಾದ ಮಾಡಬೇಕು. ರಾಜ್ಯದಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದೆ.
ಇಂದಿನ ಕಾರ್ಯಕ್ರಮದ ಪಟ್ಟಿ ನೋಡಿದರೆ ಅಭಿವೃದ್ಧಿ ಪರವಾದ ಸರ್ಕಾರ ಎಂದು ಗೊತ್ತಾಗುತ್ತದೆ. ಗ್ಯಾರಂಟಿ ಇಂದ ರಾಜ್ಯದ ಅಭಿವೃದ್ಧಿ ಗೆ ಹಣ ಇಲ್ಲ ಎಂದು ಹೇಳುವದು ವಿರೋಧ ಪಕ್ಷದವರ ಕೆಲಸ. ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಲು ಅವರು ಈ ತರಹದ ಹೇಳಿಕೆ ಕೊಡುತ್ತಿದ್ದಾರೆ. ವಿರೋಧ ಪಕ್ಷದವರು ಸುಳ್ಳು ಹೇಳಿಕೆ ಕೊಟ್ಟು ಜನರನ್ನು ದಾರಿ ತಪ್ಪಿಸಬಾರದು. ಜನರ ಮುಂದೆ ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಬನ್ನಿ ಎಂದರು. ಇನ್ನೂ ಶಾಸಕ ಯಶವಂತರಾಯಗೌಡ ಪಾಟೀಲ ಮತಕ್ಷೇತ್ರದ ಅಭಿವೃದ್ಧಿ ಮಾತ್ರ ಬಯಸುತ್ತಾರೆ. ತಮ್ಮ ಅಧಿಕಾರದ ಆಸೆ ಎಂದು ಅವರು ಪಟ್ಟಿಲ್ಲ. 3600 ಕ್ಕೂ ಅಧಿಕ ಕೋಟಿ ಹಣ ನಾವು ನೀರಾವರಿಗೆ ಖರ್ಚು ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಬಹುತೇಕ ಪ್ರದೇಶ ನೀರಾವರಿ ಆಗತ್ತೆ. ಮುಂಬರುವ ದಿನಗಳಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ನಾವು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ. ಬರ ಪೀಡಿತ ಜಿಲ್ಲೆಯನ್ನು ಸಂಪೂರ್ಣವಾಗಿ ಹಸಿರುಮಯವಾಗಿ ಮಾರ್ಪಾಡು ಮಾಡುತ್ತೇವೆ ಕೊಟ್ಟ ಮಾತಿನಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದರು…
ಇನ್ನೂ ಅತೀ ಹೆಚ್ಚಿನ ಅನುದಾನ ನೀಡಿ ಇಂಡಿ ಹಾಗೂ ನಾಗಠಾಣ ಮತಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಡಿಸಿಎಂ ಹಣ ನೀಡಿದ್ದು ಮತಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾದರು. ಇನ್ನೂ ನೀರಾವರಿಗೆ ನನ್ನ ಮತಕ್ಷೇತ್ರಕ್ಕೆ ಇಷ್ಟೋಂದು ಹಣ ಬಂದಿಲ್ಲ ಆದರೆ ಸಿಎಂ ಇಂಡಿ ಮತಕ್ಷೇತ್ರಕ್ಕೆ ಅನುದಾನ ಬಂದಿರುವ ವಿಚಾರವಾಗಿ ಸ್ವತಃ ಸಿಎಂ ಅಚ್ಚರಿ ವ್ಯಕ್ತಪಡಿಸಿದರು. ಅದು ಎನೇ ಇರಲಿ ಬರ ಪೀಡಿತ ಅಂತಾ ಹಣೆಪಟ್ಟಿ ಕಟ್ಟಿ ಕೊಂಡ ಇಂಡಿ ಮತಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನಅನುದಾನ ಕೊಟ್ಟಿದ್ದು ಮಾದರಿ ಕಾರ್ಯವೇ ಸರಿ…
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.