BELAGAVI

ಶಾಲೆಗೆ ಚಕ್ಕರ್… ಡಿಸಿಗೆ ಆಫೀಸ್’ಗೆ ಹಾಜರ್…!!!

Share

ಈ ಗ್ರಾಮದ ರೈತರು ಬೆಳಗಾವಿ ಸುವರ್ಣಸೌಧ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ತಮ್ಮ ಕೃಷಿ ಜಮೀನನ್ನೇ ನೀಡಿದ್ದಾರೆ. ಆದರೇ, ಅವರ ಮಕ್ಕಳಿಗೆ ಬಸ್ ಸೌಕರ್ಯವಿಲ್ಲದೇ, ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಗ್ರಾಮದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು ಶಾಲೆ ಬಿಟ್ಟು ನೇರವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಬೇಕೇ ಬೇಕು ಬಸ್ಸು ಬೇಕೆಂದು ಪ್ರತಿಭಟನೆಯನ್ನು ನಡೆಸಿದರು.

ಹೌದು, ಬೆಳಗಾವಿ ತಾಲೂಕಿನ ಕೊಂಡೊಸಕೊಪ್ಪ ಗ್ರಾಮದ ಹಲವಾರು ರೈತರು ಉತ್ತರ ಕರ್ನಾಟಕದ ಶಕ್ತಿ ಸೌಧ ಸುವರ್ಣಸೌಧ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ತಮ್ಮ ಜಮೀನನ್ನೇ ನೀಡಿದ್ದಾರೆ. ಆದರೇ, ಈ ಗ್ರಾಮದ ವಿದ್ಯಾರ್ಥಿಗಳಿಗೆ ಮಾತ್ರ ಬಸ್ಸಿನ ಸೌಕರ್ಯವಿಲ್ಲದೇ, ಶೈಕ್ಷಣಿಕ ನಷ್ಟ ಅನುಭವಿಸುವಂತಾಗಿದೆ. ಇಂದು ಕೊಂಡೂಸಕೊಪ್ಪ ಬಳಿ ಹೆದ್ದಾರಿ ತಡೆದು ವಿದ್ಯಾರ್ಥಿಗಳು ಬಸ್ಸಿಗಾಗಿ ಪ್ರತಿಭಟನೆ ನಡೆಸಿದರು. ಪರಿಣಾಮ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತು. ಸ್ಥಳಕ್ಕಾಗಮಿಸಿದ ಹಿರೇಬಾಗೇವಾಡಿ ಪೊಲೀಸ್ ಬಸ್ಸಿನ ಸಮಸ್ಯೆ ನೀಗಿಸುವುದಾಗಿ ಭರವಸೆ ನೀಡಿ ಮಕ್ಕಳನ್ನು ಬಸ್ಸಿಗೆ ಹತ್ತಿಸಿ ಶಾಲೆಗೆ ಕಳುಹಿಸಿದರು.

ಆದರೇ, ಬಸ್ಸಿನ ಮೂಲಕ ಶಾಲೆಗೆ ತೆರಳದೇ ನೇರವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ವಿದ್ಯಾರ್ಥಿಗಳು, ಬಸ್ಸಿನ ಕೊರತೆ ಮತ್ತು ಶೈಕ್ಷಣಿಕ ನಷ್ಟದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಶಾಲಾ ಮಕ್ಕಳೇ ಮನವಿಯನ್ನು ಬರೆದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೊಂಡೊಸಕೊಪ್ಪಿನ ವಿದ್ಯಾರ್ಥಿನಿ, ನಮ್ಮ ಊರಿಗೆ ಒಂದೇ ಒಂದು ಬಸ್ ಇದೆ. ಬೆಳಗಿನ ಜಾವ 8 ಗಂಟೆಗೆ ಬಸ್ಸಿದ್ದು ಇದ್ದು ಇಲ್ಲದಂತಾಗಿದೆ. ಇಷ್ಟು ದಿನ ಬೇರೆ ಬಸ್ಸಿ ಮೂಲಕ ಶಾಲೆಗೆ ಹೋಗುತ್ತಿದ್ದೇವು. ಆದರೇ, ಈಗ ಬೇರೆ ಬಸ್ಸಿನಲ್ಲಿ ವಿದ್ಯಾರ್ಥಿನಿಯರನ್ನು ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದಾರೆ. ಇದರಿಂದಾಗಿ ಶಾಲೆಗೆ ಪರೀಕ್ಷೆಯಿದ್ದರೂ ಹೋಗಲಾರದೇ, ಶೈಕ್ಷಣಿಕ ನಷ್ಟವಾಗುತ್ತಿದೆ. ಹಲವು ಬಾರಿ ಗ್ರಾಮದ ಪ್ರಮುಖರು ಹೇಳಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದಳು.

ಕೊಂಡಸಕೊಪ್ಪ ಗ್ರಾಮಕ್ಕೆ ಒಂದು-ಎರಡು ಕಿಲೋ ಮೀಟರ್ ಹೊರಗೆ ಬಸ್ಸ್ ಇಳಿಸಿ ಹೋಗುತ್ತಿದೆ. ಮಳೆ ಬಿಸಿಲು ಎನ್ನದೇ, ನಡೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಬಸ್ಸಿನಲ್ಲಿ ನೂಕೂ ನೂಗ್ಗಾಟ ನಡೆಸಲಾಗುತ್ತದೆ. ನಮ್ಮ ಗ್ರಾಮಕ್ಕೆ ತಾಸಿಗೊಂದು ಬಸ್ಸು ಬೇಕೆ ಬೇಕು. ನಮ್ಮ ಸಮಸ್ಯೆಯನ್ನು ನೀಗಿಸಲೇಬೇಕು ಎಂದು ವಿದ್ಯಾರ್ಥಿಗಳು ಪರಿಪರಿಯಾಗಿ ಹೇಳಿಕೊಂಡರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!