ಪ್ರತಿ ವರ್ಷ ಮಹಾನಗರಪಾಲಿಕೆಗೆ ಸಲ್ಲಿಸುವ ಅಫಿಡೇವಿಟ್ ನಲ್ಲಿ ಮೇಯರ್ ಮಂಗೇಶ್ ಪವಾರ್ ಹಾಗೂ ಸದಸ್ಯ ಜಯಂತ ಜಾಧವ ತಿನಿಸು ಕಟ್ಟೆ ವಿವರ ಸಲ್ಲಿಸಿಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಶಿಫಾರಸ್ಸು ಮಾಡಬೇಕು ಎಂದು ಪಾಲಿಕೆ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ರಾಜಕುಮಾರ ಟೋಪಣ್ಣವರ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೇಯರ್ ಮಂಗೇಶ ಪವಾರ್ ಹಾಗೂ ಸದಸ್ಯ ಜಯಂತ ಜಾಧವ ಪಾಲಿಕೆಯ ಸದಸ್ಯರಾದ ಮೇಲೆ ಪ್ರತಿ ವರ್ಷ ತಮ್ಮ ಹಾಗೂ ಕುಟುಂಬಸ್ಥರ ಆಸ್ತಿವಿವರದ ಅಫಿಡೇವಿಟ್ ಸಲ್ಲಿಸಬೇಕು. ಆದರೆ ಈ ಇಬ್ಬರು ಸಹ ತಮ್ಮ ಪತ್ನಿಯ ಹೆಸರಿನಲ್ಲಿರುವ ತಿನಿಸು ಕಟ್ಟೆಯ ಬಗ್ಗೆ ಮಾಹಿತಿ ನೀಡದೆ ಸೆಕ್ಸನ್ 19(1), 19(2),19 (3) ಉಲ್ಲಂಘನೆ ಮಾಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.
ಇನ್ನು ವಿಜಯಪುರ ಪಾಲಿಕೆಯಲ್ಲಿ ಅಫಿಡೇವಿಟ್ ನಲ್ಲಿ ಸುಳ್ಳು ಮಾಹಿತಿ ನೀಡಿದ್ದ 35 ಜನ ಸದಸ್ಯರು ಅನರ್ಹಗೊಂಡಿದ್ದರು. ಅದೇ ಮಾದರಿಯಲ್ಲಿ ಇವರುಗಳ ಮೇಲೆಯೂ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.