Chikkodi

ನೂತನ ಕಾರ್ಯಕರ್ತರ ಆಗಮನದಿಂದ ಬಿಜೆಪಿ ಪಕ್ಷ ಮತ್ತಷ್ಟು ಬಲಿಷ್ಠ :ಶಾಸಕಿ ಶಶಿಕಲಾ ಜೊಲ್ಲೆ

Share

ಚಿಕ್ಕೋಡಿ:ಬೋರಗಾಂವವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಬಂಡು ಖೋತ, ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ನಿಪ್ಪಾಣಿ ತಾಲೂಕಿನ ಭಿವಶಿ ಗ್ರಾಮದಲ್ಲಿ ನಿಪ್ಪಾಣಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬೋರಗಾಂವವಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಬಂಡು ಖೋತ,ನಿರ್ದೇಶಕರಾದ ಅನಿಲ ಗುಳಗುಳೆ, ಹಾಗೂ ರಾಹುಲ ಖೋತ,ದೀಪಕ ಖೋತ,ದಾದಾಸೋ ಖೋತ, ತಾತೋಬಾ ಕಳಂತ್ರೆ,ಕಾಂಗ್ರೆಸ್ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಅವರು ಆತ್ಮೀಯವಾಗಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಸತ್ಕರಿಸಿದರು.

ಈ ಸಂದರ್ಭದಲ್ಲಿ ಬೋರಗಾಂವವಾಡಿ ಕಾಯ೯ಕರ್ತರು ನರಸು ಖೋತ,ರಾಜು ಭದ್ರಗಡೆ, ಬಾಬು ಖೋತ, ರಾಮಗೊಂಡಾ ಪಾಟೀಲ, ಸುವರ್ಣಾ ಠಾಕ ಮಾರೆ, ಸಂಜಯ ಗುಳಗುಳೆ, ಪಾಂಡುರಂಗ ಖೋತ, ದೇವಪ್ಪಾ ಭದ್ರಗಡೆ, ದೇವ ಗೊಂಡಾ ಕಳಂತ್ರೆ, ದಾದು ಖೋತ ಉಪಸ್ಥಿತರಿದ್ದರು.

Tags:

error: Content is protected !!