ಬೆಳಗಾವಿ: ನಗರದ ವಿವಿಧೆಡೆ ಉದ್ಯಮಿ ಪ್ರಸನ್ನಾ ಘೋಟಗೆ ಅವರ 61ನೇ ಜನ್ಮದಿನವನ್ನು ಉತ್ಸಾಹದಿಂದ ಆಚರಿಸಲಾಯಿತು.
ಬೆಳಗಾವಿ ನಗರದ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಯಮಿ ಪ್ರಸನ್ನಾ ಘೋಟಗೆ ಅವರ 61ನೇ ಜನ್ಮದಿನವನ್ನು ಉತ್ಸಾಹದಿಂದ ಆಚರಿಸಲಾಯಿತು. ಅದೇ ರೀತಿ ಪರಶುರಾಮಭಾವು ನಂದಿಹಳ್ಳಿ ಆಶ್ರಮದಲ್ಲಿ ಹುಟ್ಟುಹಬ್ಬವನ್ನು ಆಚರಿಸಿ, ರೇಷನ್ ಕಿಟ್ ವಿತರಿಸಲಾಯಿತು. ಗಂಗಮ್ಮ ಚಿಕ್ಕುಂಬಿಮಠದಲ್ಲಿಯೂ ಹುಟ್ಟುಹಬ್ಬದ ನಿಮಿತ್ಯ ರೇಷನ್ ಕಿಟ್ ನೀಡಲಾಯಿತು.
ಆಶ್ರಯ ಫೌಂಡೇಶನ, ಟಿಳಕವಾಡಿಯ ಸ್ವಾಮಿ ದಯಾನಂದ ಆರ್ಷ ವಿದ್ಯಾ ಸೇವಾ ಸಂಸ್ಥೆ, ವೈಭವನಗರದ ನಂದನ ಮಕ್ಕಳಧಾಮ, ಗಣೇಶಪೂರದ ಲೋಮ್ಯಾಕ್ಸ್ ಆಶ್ರಮ, ಮಹಾಂತೇಶನಗರದ ಆಶ್ರಯ ಫೌಂಡೇಶನ್, ಕಂಗ್ರಾಳಿಯ ಸಮೃದ್ಧಿ ಫೌಂಡೇಶನ್, ಆಶಾ ಜ್ಯೋತಿ ಎಸ್.ಸಿ. ಎಸ್.ಟಿ ಮಹಿಳಾ ಅಭಿವೃದ್ಧಿ ಕೇಂದ್ರದಲ್ಲಿಯೂ ಉದ್ಯಮಿ ಪ್ರಸನ್ನಾ ಘೋಟಗೆ ಅವರ 61ನೇ ಜನ್ಮದಿನವನ್ನು ಉತ್ಸಾಹದಿಂದ ಆಚರಿಸಲಾಯಿತು.