BELAGAVI

ಪ್ರತಿಭಟನಾನಿರತ ಪಾಲಿಕೆ ಸಿಬ್ಬಂದಿಯನ್ನು ಭೇಟಿ ಮಾಡಿದ ಸದಸ್ಯರು

Share

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಸಿಬ್ಬಂದಿಗಳ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಪ್ರತಿಭಟನಾಕಾರರನ್ನು ಭೇಟಿಮಾಡಿದ ಪಾಲಿಕೆಯ ಮೇಯರ, ಉಪಮೇಯರ ಹಾಗೂ ನಗರ ಸೇವಕರು ಸರ್ಕಾರಕ್ಕೆ ಪತ್ರ ಬರೆದು ತಮ್ಮ ಬೇಡಿಕೆ ಈಡೇರಿಸುದಾಗಿ ಭರವಸೆ ನೀಡಿದರು

ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡರು ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ ಉಪಮೇಯರ ಹಾಗೂ ನಗರ ಸೇವಕರುಗಳಿಗೆ ಮನವಿ ಪತ್ರ ಅರ್ಪಿಸಿ ಬೇಡಿಕೆಗಳ ಕುರಿತು ವಿವರವನ್ನು ನೀಡಿದರು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ನಗರ ಸೇವಕ ಹನುಮಂತ ಕೋಂಗಾಲಿ ಮಹಾನಗರ ಪಾಲಿಕೆಯ ಸಿಬ್ಬಂದಿಗಳ ಬೇಡಿಕೆಗಳು ಯೋಗ್ಯವಾಗಿವೆ. ಆರೋಗ್ಯ, ಶಿಕ್ಷಣ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ನಾವು ಕೌನ್ಸಲಿಂಗ ಸಭೆಯಲ್ಲಿ ಚರ್ಚಿಸಿದ್ದೇವೆ. ಮಹಾನಗರ ಪಾಲಿಕೆ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಗುವುದು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಮೇಯರ್ ಮಂಗೇಶ್ ಪವಾರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರ ಬೇಡಿಕೆಗಳು ಯೋಗ್ಯವಾಗಿದ್ದು, ಈಗಾಗಲೇ ಶಾಸಕ ಅಭಯ ಪಾಟೀಲ ಅವರು ಅಧಿವೇಶನದಲ್ಲಿ ಸಿಎಂ ಗಮನಕ್ಕೆ ತರಲಾಗುವುದು. ಪಾಲಿಕೆ ಸಭೆಯಲ್ಲಿ ಠರಾವು ಪಾಸು ಮಾಡಲು ಸೂಚಿಸಿದ್ದಾರೆ

ಈ ಸಂದರ್ಭದಲ್ಲಿ ಉಪಮೇಯರ ವಾಣಿ ಜೋಶಿ ಹಾಗೂ ಗೀರಿಶ ದೊಂಡಗಿ ಪಾಲಿಕೆ ಸದಸ್ಯರು, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ದ್ಯಾವಣ್ಣವರ್, ಪದಾಧಿಕಾರಿಗಳಾದ ಮಾಲಿ ಗುಂಡಪ್ಪನವರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು
ಇದಕ್ಕೋ ಮುಂಚೆ ಪ್ರತಿಭಟಮಾಕಾರರನ್ನು ಭೇಟಿ ಮಾಡಿದ ಶ್ರೀರಾಮ ಸೇನೆ ಹಿಂದುಸ್ಥಾನ ಸಂಸ್ಥಾಪಕ ರಮಾಕಾಂತ ಕೋಂಡಸ್ಕರ್ ಮಾತನಾಡಿ, ನಗರವನ್ನು ಸ್ವಚ್ಛಗೋಳಿಸುವ ಕಾರ್ಮಿಕರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾಲಿಕೆಯ ಸಿಬ್ಬಂದಿಗಳಿಗೆ ಆರೋಗ್ಯ ಸೌಲಭ್ಯ ಇನ್ನಿತರ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳುವಂತೆ ವಿನಂತಿಸಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು.

Tags:

error: Content is protected !!