BELAGAVI

ಗೌರಿ ಮಹಿಳಾ ಮಂಡಳದಿಂದ ಗುರುಪೂರ್ಣಿಮೆ; ಗುರುವಂದನಾ ಕಾರ್ಯಕ್ರಮ

Share

ಗುರುಪೂರ್ಣಿಮೆಯ ವಿಶೇಷ ನಿಮಿತ್ತವಾಗಿ ಗೌರಿ ಮಹಿಳಾ ಮಂಡಳದ ವತಿಯಿಂದ “ಗುರುವಂದನಾ” ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಪ್ರತಿಜ್ಞಾ ರಾಚನಾಯ್ಕರ್ ಹಾಗೂ ಶ್ರೀಮತಿ ಪ್ರತಿಭಾ ಕಳ್ಳಿಮಠ ಆಗಮಿಸಿ ಮಾರ್ಗದರ್ಶನ ಮಾಡಿದರು. ಮಹಿಳಾ ಮಂಡಳದ ಅಧ್ಯಕ್ಷೆ ಡಾ. ಮಹಾದೇವಿ ಹಾಗರಗಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಗೌರಿ ಪಾಟೀಲ, ಜಯಲಕ್ಷ್ಮಿ ಬಾಳೆಕುಂದ್ರಿ, ಸ್ನೇಹಲ್ ಕಾಲಭೈರವ, ಜಯಶ್ರೀ ಹರಕುಣಿ, ನೇಹಾ ಕಿಶನ್ ಹಾಗೂ ವಿನೋದ ಹೊಂಗಲ್ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಮಂಡಳದ ಅಧ್ಯಕ್ಷರಾದ ಡಾ. ಮಹಾದೇವಿ ಹಾಗರಗಿ, ಉಪಾಧ್ಯಕ್ಷರಾದ ಶಶಿಕಲಾ ಜಗಜಂಪಿ ಹಾಗೂ ಕಾರ್ಯದರ್ಶಿಗಳಾದ ಸುಜಾತ ಗೋಕಾಕ್, ಜಯಶ್ರೀ ಕರಾಡ್ಕರ್, ಸವಿತಾ ಪಾಟೀಲ್, ಪ್ರೇಮಾ ಎತ್ತಿನಮನಿ ಸೇರಿದಂತೆ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯ ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಲತಾ ಶೆಟ್ಟಿ ಮಾಡಿದರು ಹಾಗೂ ವಂದನೆಯನ್ನು ಲತಾ ಪಾಟೀಲ್ ಅವರು ವಂದನಾರ್ಪಣೆ ನೆರವೇರಿಸಿದರು.

Tags:

error: Content is protected !!