Belagavi

ಖತರನಾಕ ಕಳ್ಳರ ಬಂಧಿಸಿದ ಪೊಲೀಸರು

Share

ಜನರಿಗೆ ಹೆದರಿಸಿ ಬೇದರಿಸಿ ಜಬರದಸ್ತ ಮಾಡಿ ಅವರಿಂದ ನಗನಾಣ್ಯ ದೋಚುತ್ತಿದ್ದ ನಾಲ್ವರು ಖದೀಮ ಕಳ್ಳರನ್ನು ಪೊಲೀಸರು ಹೆಡೆಮೂಡಿ ಕಟ್ಟಿ ಬಂಧಿಸಿರುವ ಘಟನೆ ಜರುಗಿದೆ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪಾರನಟ್ಟಿ ಗ್ರಾಮದ ಬಸವರಾಜ್ ಗೋದಿ,ಸಿದ್ದಪ್ಪ ಧರ್ಮಟ್ಟಿ,ಮುತ್ತೆಪ್ಪ ಪೂಜೇರಿ, ಬಸವರಾಜ್ ಪೂಜೇರಿ ಎಂಬುವರು ಜನರನ್ನು ಹೆದರಿಸಿ ಬೇದರಿಸಿ ಜಬರದಸ್ತ ಮಾಡಿ ನಗನಾಣ್ಯ ದೋಚುತ್ತಿದ್ದರು ಈ ಕುರಿತು ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಬೇಧಿಸಲು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ ವಿಶೇಷ ತಂಡ ರಚನೆ ಮಾಡಿದ್ದರು ವಿಶೇಷ ತಂಡದ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿ ಅವರಿಂದ 12.5 ಗ್ರಾಂ ತೂಕದ ಚಿನ್ನಸ ಸರ, 50 ಗ್ರಾಂ ತೂಕದ ಚಿನ್ನದ ಮಾಂಗಲ್ಯಸೂತ್ರ ,ಬಂಗಾರದ ಎರಡು ಎಳೆ ಸರ ಸೇರಿ ಒಟ್ಟು 6,70,000 ರೂಪಾಯಿ ಮೌಲ್ಯದ ಬಸ್ತುಗಳನ್ನು ವಶಕ್ಕೆ ಪಡೆದು ಖದೀಮರ ಹೆಡೆಮುರಿ ಕಟ್ಟಿದ್ದಾರೆ

Tags:

error: Content is protected !!