Belagavi

ಆ್ಯಂಟಿ ಸ್ಕ್ಯಾಬಿಂಗ್ ಸ್ಕ್ಯಾಡ್ ಕಾರ್ಯಾಚರಣೆ

Share

ಇತ್ತೀಚಿನ ದಿನಗಳಲ್ಲಿ ಸ್ಟ್ರಾಬಿಂಗ್ ಪ್ರಕರಣಗಳು ಹೆಚ್ಚಾಗುತ್ತಿದ್ದುದ್ದರಿಂದ ಆ್ಯಂಟಿ ಸ್ಕ್ಯಾಬಿಂಗ್ ಸ್ಕ್ಯಾಡ್ ಕಾರ್ಯಾಚರಣೆ ನಡೆಸಿ ಅಕ್ರಮ ಮಾರಕಾಸ್ತ್ರ ಹೊಂದಿದ ವ್ಯಕ್ತಿಯ ಬಂಧನ ಮಾಡಿರುವ ಘಟನೆ ಜರುಗಿದೆ

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಪಿಎಸ್ಐ ಯು.ಟಿ. ಪಾಟೀಲ್ ಮತ್ತು ಅವರ ತಂಡವು ಜುಲೈ 21, 2025 ರಂದು ಗಸ್ತು ತಿರುಗುತ್ತಿದ್ದಾಗ ಆನಂದ್ ಪರಶುರಾಮ್ ಭಜಂತ್ರಿ (ವಯಸ್ಸು 21,) ಮನೆ ಸಂಖ್ಯೆ 8, ಮುಸ್ಲಿಂ ಗಲ್ಲಿ, ಶ್ರೀನಗರ ಅಪಾರ್ಟ್ಮೆಂಟ್ ನಿವಾಸಿ) ಅವರನ್ನು ಬಂಧಿಸಿತು. ಅವರ ಬಳಿ ಅಕ್ರಮ ಹರಿತವಾದ ಮತ್ತು ಅಪಾಯಕಾರಿ ಕಬ್ಬಿಣದ ಆಯುಧ ಪತ್ತೆಯಾಗಿದೆ. ಪೊಲೀಸರು ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ಆಯುಧವನ್ನು ವಶಪಡಿಸಿಕೊಂಡರು.ಈ ಪ್ರಕರಣದಲ್ಲಿ, ಆನಂದ್ ಭಜಂತ್ರಿ ವಿರುದ್ಧ ಕೆ.ಪಿ. ಕಾಯ್ದೆಯಡಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಕಾರ್ಯಕ್ಕಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಪಿಎಸ್ಐ ಯು.ಟಿ. ಪಾಟೀಲ್ ಮತ್ತು ಅವರ ತಂಡವನ್ನು ಶ್ಲಾಘಿಸಿದ್ದಾರೆ.

Tags:

error: Content is protected !!