ಧೋ ಧೋ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೀಜ ಭಿತ್ತಿ ಸಮೃದ್ಧ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತನ ಕನಸಿನ ಮೇಲೆ ನೀರೆರಚಿದಂತಾಗಿದೆ. ಮೊದಲೂ ಬೆಳೆದ ಬೆಳೆ ನೀರಿಗಾಹುತಿಯಾಗಿ ಈಗ ಮತ್ತೋಮ್ಮೆ ಬಿತ್ತನೆ ಮಾಡುವ ಸಂದರ್ಭ ಎದುರಾಗಿದೆ.

ಹೌದು, ಈ ಬಾರಿ ಅವಧಿಗೂ ಮುನ್ನ ಮಳೆರಾಯ ಅಬ್ಬರಿಸಿ ಬೊಬ್ಬರೆದಿದ್ದಾನೆ. ಇದರಿಂದ ಪ್ರತಿವರ್ಷದಂತೆ ಬೀಜ ಬಿತ್ತಿ, ಭತ್ತ ಬಿತ್ತಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತನ ಅಂದಾಜು ತಪ್ಪಿದಂತಾಗಿದೆ. ಅತಿವೃಷ್ಠಿಯಿಂದಾಗಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ನೀರಿಗಾಹುತಿಯಾಗಿದೆ. ಮತ್ತೇ ಸಾಲ ಸೂಲ ಮಾಡಿ ಮತ್ತೋಬ್ಬರ ಸಹಾಯ ಪಡೆದು ಬಿತ್ತನೆ ಮಾಡುತ್ತಿರುವ ದೃಶ್ಯಗಳು ಬೆಳಗಾವಿ ತಾಲೂಕಿನಲ್ಲಿ ಕಂಡು ಬರುತ್ತಿವೆ. ಬೆಳಗಾವಿ ತಾಲೂಕಿನ ಉಚಗಾಂವ, ಸುಳಗಾ, ಕಲ್ಲೆಹೋಳ, ಕುದ್ರೇಮನಿ, ಹಲಗಾ, ಬಸ್ತವಾಡ ಇನ್ನುಳಿದ ಕಡೆಗಳಲ್ಲಿ ಹೆಚ್ಚಾಗಿ ಭತ್ತವನ್ನು ಬೆಳೆಯಲಾಗುತ್ತದೆ.

ಆಲೂಗಡ್ಡೆ ಮತ್ತು ಇನ್ನುಳಿದ ತರಕಾರಿಗಳು ಇವರ ಉಪ ಬೆಳೆಗಳಾಗಿವೆ. ಅಧಿಕ ಮಳೆಯ ಹಿನ್ನೆಲೆ ಮೊದಲೊಮ್ಮೆ ಬೆಳೆದ ಬೆಳೆ ಹಾಳಾಗಿ ಹೋಗಿದ್ದು, ಈಗ ಮತ್ತೋಮ್ಮೆ ಭತ್ತದ ಲಾವಣಿಯನ್ನು ಮಾಡಲಾಗುತ್ತಿದೆ. ಈ ಬಾರಿ ಮಳೆ ಅವಧಿಗೂ ಮುನ್ನವೇ ಆರಂಭಗೊಂಡಿದೆ. ಈ ಹಿನ್ನೆಲೆ ರೈತರು ದ್ವಂದ್ವಕ್ಕೆ ಸಿಲುಕಿದ್ದಾರೆ. ಮೊದಲೂ ಭತ್ತ ನಂತರದಲ್ಲಿ ಆಲೂಗಡ್ಡೆ ಸೇರಿದಂತೆ ಇನ್ನುಳಿದ ಬೆಳೆಗಳನ್ನು ಬೆಳೆಯುತ್ತೇವೆಂದು ರೈತರು ತಿಳಿಸಿದರು.
ಭತ್ತದೊಂದಿಗೆ, ಕಬ್ಬು, ಗೆಣಸು, ಆಲೂಗಡ್ಡೆ ಇನ್ನುಳಿದ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಮೊದಲೂ ಬೆಳೆದ ಭತ್ತ ನೀರಿಗಾಹುತಿಯಾಯಿತು. ಈಗ ಮತ್ತೇ ಭತ್ತವನ್ನು ಬೆಳೆಯುವ ಪರಿಸ್ಥಿತಿ ಎದುರಾಗಿದೆ.
