ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಮತ್ತೇ ಅಕ್ರಮ ಪಡಿತರ ಅಕ್ಕಿ ದಂಧೆ ಬಯಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಾರ್ಯವೈಖರಿ ಜನರಲ್ಲಿ ಶಂಕೆ ಮೂಡಿದೆ.
ಗಡಿಪಾರಾದ ಆರೋಪಿ ರಾಘವೇಂದ್ರ ತೇಲಿ, ಈಗ ಮತ್ತೆ ಅಕ್ಕಿ ಅಕ್ರಮವಾಗಿ ದಂಧೆಯಲ್ಲಿ ಸಕ್ರಿಯನಾಗಿದ್ದಾನೆ. ರಿಜಿಸ್ಟ್ರೇಶನ್ ಇಲ್ಲದ ಲಾರಿ ಹಾಗೂ ಮಿನಿ ಟ್ರಕ್‌ನಲ್ಲಿ ಚೀಲ ಬದಲಿಸಿ ಚಿಕ್ಕೋಡಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಮಹಾಲಿಂಗಪುರ ಠಾಣೆ ಪೊಲೀಸರು ಸುಮಾರು 52 ಸಾವಿರ ರೂ ಮೌಲ್ಯದ 15 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಮಲ್ಲಪ್ಪ ಅಥಣಿ ಹಾಗೂ ರಾಘವೇಂದ್ರ ತೇಲಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.