KHANAPUR

ರೈಲಿನಲ್ಲಿ ನಿದ್ದೆಗೆ ಜಾರಿದ ಯುವಕನ 1 ಲಕ್ಷ 9 ಸಾವಿರ ಮೌಲ್ಯದ ವಸ್ತುಗಳನ್ನು ಎಗರಿಸಿದ ಕಳ್ಳರು!!!

Share

ರಾತ್ರಿಯ ವೇಳೆ ರೇಲ್ವೆಯಲ್ಲಿ ನಿದ್ದೆಗೆ ಜಾರಿದ್ದ ಯುವಕನ ಪರ್ಸ್ ಪಿಕೇಟ್ ಪಾಕೇಟ್ ಮಾಡಿದ್ದು ಸುಮಾರು 1 ಲಕ್ಷ 9 ಸಾವಿರ ಮೌಲ್ಯದ ವಸ್ತುವನ್ನು ಎಗರಿಸಿಕೊಂಡು ಹೋದ ಘಟನೆ ಖಾನಾಪೂರ ತಾಲೂಕಿನ ಲೋಂಡಾ-ಮೀರಜ್ ರೇಲ್ವೆಯಲ್ಲಿ ನಡೆದಿದೆ.

ಲೋಂಡಾ ಗ್ರಾಮದ ದೀಪಕ ಮಡ್ಡಿ ಶುಕ್ರವಾರ ರಾತ್ರಿ ಮೀರಜ್-ಲೋಂಡಾ ಪ್ಯಾಸೇಂಜರ್ ರೈಲಿನ ಮೂಲಕ ಬೆಳಗಾವಿಯಿಂದ ಲೋಂಡಾ ಮಾರ್ಗವಾಗಿ ಸಂಚರಿಸುವಾಗ ತಡರಾತ್ರಿ ನಿದ್ದೆಗೆ ಜಾರಿದೆ. ಲೋಂಡಾ ಸ್ಟೇಷನ್ ತಲುಪಿ ಒಂದು ಗಂಟೆಯಾದರೂ ಎಚ್ಚರಾಗಲಿಲ್ಲ. ಎದ್ದು ನೋಡಿದಾಗ ಜೇಬಿನಲ್ಲಿದ್ದ ಪಾಕೇಟ್’ನ್ನು ಯಾರೋ ಅಪರಿಚಿತರು ಪಿಕ್ ಪಾಕೇಟ್ ಮಾಡಿದ್ದಾರೆ. ಅಲ್ಲದೇ, ಡಾಕ್ಯುಮೇಂಟ್’ಗಳನ್ನು ಲೋಂಡಾ ಗ್ರಾಮ ಪಂಚಾಯಿತಿ ಪಕ್ಕದ ಪ್ರದೇಶದಲ್ಲಿ ಚೆಲ್ಲಿ ಹೋಗಿದ್ದಾರೆ. ಇದರಲ್ಲಿ ಐಡಿ ಕಾರ್ಡ್, 9300 ರೂಪಾಯಿ ನಗದು, 1ಲಕ್ಷ ಮೌಲ್ಯದ 10 ಗ್ರಾಂ ಚಿನ್ನದ ನಾಣ್ಯವನ್ನು ಖದೀಮರು ಎಗರಿಸಿದ್ದಾರೆ.

ದೀಪಕ್ ಮಡ್ಡಿ ಅವರು ಈ ಕುರಿತು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮ ಪಂಚಾಯಿತಿ ಸಿಸಿಟ್ಹಿವಿಯ ಫೂಟೇಜ್ ಆಧರಿಸಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಸಿಸಿಟ್ಹಿವಿಯಲ್ಲಿ ರಾತ್ರಿಯ ವೇಳೆ ಓರ್ವ ಆಗಂತುಕನ ದೃಶ್ಯ ಸೆರೆಯಾಗಿದೆ.

Tags:

error: Content is protected !!