ಬೆಳಗಾವಿ ಪೊಲೀಸ್ ಆಯುಕ್ತಾಲಯವು ಕಳೆದ ಎರಡು ವರ್ಷಗಳಲ್ಲಿ ಗಂಭೀರ ಕ್ರಮ ಕೈಗೊಂಡಿದ್ದು, ಮಾದಕದ್ರವ್ಯ ಮತ್ತು ಜೂಜು ಕೃತ್ಯಗಳ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದೆ.
2023 ರಲ್ಲಿ 23 ಪ್ರಕರಣಗಳಲ್ಲಿ 34 ಆರೋಪಿಗಳನ್ನು ಬಂಧಿಸಿ ₹5.71 ಲಕ್ಷ ಮೌಲ್ಯದ 12.679 ಕೆ.ಜಿ ಮಾದಕದ್ರವ್ಯ ವಶಪಡಿಸಿಕೊಳ್ಳಲಾಯಿತು. 2024 ರಲ್ಲಿ 25 ಪ್ರಕರಣಗಳು ದಾಖಲಾಗಿದ್ದು, 39 ಆರೋಪಿಗಳು ಬಂಧಿತರಾಗಿದ್ದು ₹10.68 ಲಕ್ಷ ಮೌಲ್ಯದ 11.788 ಕೆ.ಜಿ ಮಾದಕ ವಸ್ತು ಸಿಕ್ಕಿದೆ. 2025 ರಲ್ಲಿ (ಜುಲೈ 13 ರವರೆಗೆ) 20 ಪ್ರಕರಣಗಳಲ್ಲಿ 42 ಆರೋಪಿಗಳು ಬಂಧಿತರಾಗಿದ್ದು ₹6.23 ಲಕ್ಷ ಮೌಲ್ಯದ 17.232 ಕೆ.ಜಿ ಮಾದಕ ವಸ್ತು ವಶಕ್ಕೆ ಬಂದಿದೆ.
ಜೂಜು ಹಾಗೂ ಮಟ್ಕಾ ಪ್ರಕರಣಗಳಿಗೆ ಸಂಬಂಧಿಸಿದಂತೆ 2023 ರಲ್ಲಿ 123 ಪ್ರಕರಣಗಳಲ್ಲಿ 411 ಆರೋಪಿಗಳನ್ನು ಬಂಧಿಸಿ ₹9.15 ಲಕ್ಷ ವಶಪಡಿಸಲಾಗಿದೆ. 2024 ರಲ್ಲಿ 124 ಪ್ರಕರಣಗಳು, 326 ಬಂಧನಗಳು ಮತ್ತು ₹12.56 ಲಕ್ಷ ವಶ. 2025 ರಲ್ಲಿ ಈಗಾಗಲೇ 95 ಪ್ರಕರಣಗಳಲ್ಲಿ 256 ಆರೋಪಿಗಳು ಬಂಧನದಲ್ಲಿದ್ದು ₹6.49 ಲಕ್ಷ ವಶಪಡಿಸಲಾಗಿದೆ. ಒಟ್ಟು 342 ಪ್ರಕರಣಗಳಲ್ಲಿ 993 ಮಂದಿ ಬಂಧಿತರಾಗಿ ₹28.21 ಲಕ್ಷ ಮೌಲ್ಯದ ನಗದು ವಶಕ್ಕೆ ಬಂದಿದೆ.