ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಬಿಜೆಪಿ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಮಾತನಾಡಿರುವುದನ್ನು ಖಂಡಿಸಿ ನೇಗಿನಹಾಳ ಗ್ರಾಮದ ಶಾಸಕರ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿಯ ನೂರಾರು ಕಾರ್ಯಕರ್ತರು ಸೇರಿರುತ್ತಾರೆ
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಸಂದೀಪ್ ದೇಶಪಾಂಡೆ ಬಿಜೆಪಿ ಮುಖಂಡರು ಮಾತನಾಡುವ ಬರದಲ್ಲಿ ಬಸವಣ್ಣನವರ ವಚನ ಬಗ್ಗೆ ಉಲ್ಲೇಖ ಮಾಡಿ ವಚನಗಳ ಬಗ್ಗೆ ಅಪಹಾಸ್ಯ ಮಾಡಿ ವಚನಗಳನ್ನು ಬೇರೆ ರೀತಿಯಲ್ಲಿ ತಿರುಚಿ ಮಾತನಾಡಿದ್ದಾರೆ ಹಾಗೂ ಪಕ್ಕದಲ್ಲಿ ಇರುವಂತ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರು ವಚನಗಳ ಅಪಹಾಸ್ಯ ಮಾಡುವಾಗ ನಗುತ್ತಿರುವ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ
ಯಾವುದೇ ಪಕ್ಷದವರು ಬಸವಣ್ಣನವರ ವಚನಗಳನ್ನು ರಾಜಕೀಯ ವಿಷಯದಲ್ಲಿ ಬಳಕೆ ಮಾಡಿದರೆ ನಾವು ಸಹಿಸುವುದಿಲ್ಲ ನಿನ್ನೆಯ ಬಿಜೆಪಿ ಸಂದೀಪ್ ದೇಶಪಾಂಡೆ ಹೇಳಿಕೆಯನ್ನು ಖಂಡಿಸಿ ನಿನ್ನೆ ನೇಗಿನಹಾಳ ಗ್ರಾಮದಲ್ಲಿ ಪಂಚಮಸಾಲಿ ಲಿಂಗಾಯತ ಯುವ ಮುಖಂಡರು ಬಿಜೆಪಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು
ಈ ಘಟನೆ ಬಗ್ಗೆ ರಾಜ್ಯಾದ್ಯಂತ ದೊಡ್ಡ ಹೋರಾಟ ಕೂಡ ನಡೆಸಲಾಗುವುದೆಂದು ಎಂದು ಪಂಚಮಸಾಲಿ ಯುವಕರು ತಿಳಿಸಿದರು
ವರದಿಗಾರರು
ಶಾನೂಲ ಮತ್ತೆಖಾನ
ಕಿತ್ತೂರು