ಬೆಳಗಾವಿ ಚಳಿಗಾಲದ ಅಧಿವೇಶನ ವೇಳೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪಟ್ಟಣದಲ್ಲಿ ಬಸವ ಜಯಂತಿಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದ ಹೈಕೋರ್ಟ್ ಆದೇಶಕ್ಕ ತಡೆಯಾಜ್ಞೆ ತರಲು ಅರ್ಜಿ ಸಲ್ಲಿಸಿದ್ದ ರಾಜ್ಯ ಸರಕಾರದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು ಹೈಕೋರ್ಟ್ ಆದೇಶಕ್ಕೆ ವಿಜಯಪುರದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮಿಜಿ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಕಾನೂನು ಬಾಹಿರವಾಗಿ ಪೊಲಿಸ್ ರಿಗೆ ಕುಮ್ಮಕ್ಕು ಕೊಟ್ಟು ಪ್ರತಿಭಟನಾಕಾರರ ಮೇಲೆ ಮಾರಣಾಂತಿವಾದಂತಹ ಹಲ್ಲೆಯನ್ನ ಸರಕಾರ ಮಾಡಿಸಿತ್ತು ಕಾನೂನು ಬಾಹಿರವಾಗಿ ಹಲ್ಲೆ ಮಾಡಿರುವಂತಹ ಅಧಿಕಾರಿಗಳನ್ನ ಅಮಾನತ್ತು ಮಾಡಬೇಕೆಂದು ನಾವು ಆಗ್ರಹಿಸಿದ್ದೇವು ಕೆಲ ಸಮಾಜದ ನಾಯಕರು ಅಧಿವೇಶನದಲ್ಲು ಪೊಲಿಸ್ ರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು ಆದ್ರೆ ರಾಜ್ಯ ಸರಕಾರ ಇದಕ್ಕೆ ಸ್ಪಂದನೆ ಮಾಡಲಿಲ್ಲ
ನಂತರ 9 ದಿನಗಳ ಸತ್ಯಾಗ್ರಹ ಮಾಡಿ ಆಗ್ರಹಿಸಿದ್ದೆವು ಅದಕ್ಕು ರಾಜ್ಯ ಸರಕಾರ ಕ್ಯಾರೆ ಅನ್ನಲಿಲ್ಲ ರಾಜ್ಯ ಸರಕಾರ ಮಾಡಿದ ತಪ್ಪನ್ನು ಪ್ರಶ್ನಿಸಿ ಹೈಕೋರ್ಟ್ ಗೆ ನಾವು ಅರ್ಜಿ ಸಲ್ಲಿಸಿದ್ದೇವು ಎಪ್ರಿಲ್ 4 ರಂದು ನಮ್ಮ ಅರ್ಜಿ ಸ್ವೀಕಾರ ಮಾಡಿ ಹೈಕೋರ್ಟ್ ನ್ಯಾಯಮೂರ್ತಿಗಳು ಐತಿಹಾಸಿಕವಾದ ತೀರ್ಪು ನೀಡಿದ್ದು ಮೂರು ತಿಂಗಳ ಒಳಗಾಗಿ ಅದನ್ನ ಮೂರು ಜನ ನ್ಯಾಯ ಮೂರ್ತಿಗಳ ಮೂಲಕ ತನಿಖೆ ಮಾಡಿ ವರದಿ ನೀಡಲು ಆದೇಶಿಸಿತ್ತು ಆದ್ರೆ ಮೂರು ತಿಂಗಳು ಕಳೆದ್ರೂ ರಾಜ್ಯ ಸರಕಾರ ಯಾವುದೆ ತನಿಖೆ ಮಾಡುವ ಪ್ರಯತ್ನ ಮಾಡಲಿಲ್ಲ
ರಾಜ್ಯ ಸರಕಾರಕ್ಕೆ ಬಹುತೇಕ ಪಶ್ಚಾತಾಪ ಅಗಿದೆ ಅನಿಸುತ್ತೆ,ಕಾರಣ ತಮ್ಮ ತಪ್ಪು ಮುಚ್ಚಿಕೊಳ್ಳಲು ಹೈಕೋರ್ಟ್ ಆದೇಶಕ್ಕೆ ತಡೆ ತರುವ ಪ್ರಯತ್ನ ಮಾಡಿದ್ದು ಇವತ್ತು ರಾಜ್ಯ ಸರಕಾರ ಸಲ್ಲಿಸಿರುವ ಅರ್ಜಿಯನ್ನ ಹೈಕೊರ್ಟ ತಿರಸ್ಕರಿಸಿದೆ ಇದರಿಂದ ನಮಗೆ ಬಹಳ ಸಂತೋಷವಾಗಿದೆ ಹೈಕೋರ್ಟ್ ನ್ಯಾಯಮೂರ್ತಿಗಳ ಆದೇಶವನ್ನು ನಾನು ಸ್ವಾಗತ ಮಾಡ್ತೆನಈಗಲಾದ್ರೂ ಸರಕಾರ ಮೊಂಡು ಹಠವನ್ನ ಬಿಟ್ಟು ತಪ್ಪು ಪೊಲಿಸ್ ರದೋ ಅಥವಾ ಹೋರಾಟಗಾರರದ್ದೊ ಎಂಬುದು ತನಿಖೆ ಆಗಲಿ ತನಿಖೆ ಮೂಖಾಂತರವಾಗಿ ನಾಡಿನ ಜನತೆಗೆ ಸತ್ಯ ಗೊತ್ತಾಗಲಿ.ಪೊಲಿಸ್ ರಿಂದ ಹಲ್ಲೆ ಮಾಡಿಸಿರುವುದು ನಮ್ಮ ಮನಸಿಗೆ ನೋವಾಗಿದೆ ಎಂದರು.