ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಎಚ್ಚು ಮಳೆಯಾಗಿದ್ದು, ಇದರಿಂದಾಗಿ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಜತೆಗೆ ಬೆಣ್ಣಿ ಹಳ್ಳ ಹಾಗೂ ತುಪರಿ ಹಳ್ಳಗಳ ಅವಾಂತರದಿಂದ ರೈತರು ನಲುಗಿ ಹೋಗಿದ್ದಾರೆ. ಆದರೆ ಈಗ ಮುಂಗಾರು ಬೆಳೆ ಆಘಾತದಲ್ಲಿರುವ ನವಲಗುಂದ ತಾಲೂಕಿನ ರೈತರಿಗೆ ಬ್ಯಾಂಕ್ ಆಫ್ ಬರೋಡಾ ನೋಟಿಸ್ ನೀಡುವ ಮೂಲಕ ಶಾಕ್ ನೀಡಿದೆ. ಅದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.
GFX STRT….
ನವಲಗುಂದದ ಮೊರಬ ಗ್ರಾಮದ ರೈತರಿಗೆ ನೋಟಿಸ್ ನೀಡಿ ಶಾಕ್ ನೀಡಿದ ಬ್ಯಾಂಕ್ ಆಫ್ ಬರೋಡಾ.
ಸಾಲಾ ಮರುಪಾವತಿಗೆ ರೈತರಿಗೆ ನೋಟಿಸ್ ಕಂಗಾಲಾದ ಅನ್ನದಾತ.
ಮಳೆಯ ಶಾಕ್ ನಡುವೆಯೂ ನೋಟಿಸ್ ಶಾಕ್‌ನಲ್ಲಿರುವ
ಹೀಗೆ ಕೈಯಲ್ಲಿ ಬ್ಯಾಂಕ್ ನೀಡಿದ ನೋಟಿಸ್ ಹಿಡಿದು ನಿಂತಿರುವ ಇವರೆಲ್ಲ ನವಲಗುಂದ ತಾಲೂಕಿನ ಮೊರಬ ಗ್ರಾಮದ ರೈತರು. ಈ ರೈತರು ಕೃಷಿ ಚಟುವಟಿಕೆಗಾಗಿ ಅದೇ ಗ್ರಾಮದ ಬ್ಯಾಂಕ್ ಆಫ್ ಬರೋಡಾದಲ್ಲಿ ಸಾಲ ಪಡೆದುಕೊಂಡಿದ್ದರು. ಈ ಮಧ್ಯೆ ಕೆಲ ವರ್ಷ ಕಟಬಾಕಿ ಸಹ ತುಂಬಿ ಬ್ಯಾಂಕಿನಲ್ಲಿ ತಮ್ಮ ವ್ಯವಹಾರಕ್ಕೆ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಆದರೆ, ಇತ್ತೀಚಿನ ಕೆಲ ವರ್ಷಗಳ ಕಾಲ ರೈತರು ಸಾಲ ಮರುಪಾವತಿ ಮಾಡಿರಲಿಲ್ಲ. ಇದಕ್ಕೆ ಅತಿವೃಷ್ಟಿಯೋ ಅನಾವೃಷ್ಟಿಯೋ ಹಲವು ಕಾರಣಗಳಿರಬಹುದು. ಸದ್ಯ ರೈತರು ಸಾಲ ಮರುಪಾವತಿ ಮಾಡುವಂತೆ ಹಾಗೂ ಕಟಬಾಕಿ ತುಂಬುವಂತೆ ಆ ಬ್ಯಾಂಕ್‌ನಲ್ಲಿ ಯಾರ್‍ಯಾರು ಸಾಲ ಪಡೆದುಕೊಂಡಿದ್ದಾರೋ ಅವರೆಲ್ಲರಿಗೂ ಬ್ಯಾಂಕ್ ನೋಟಿಸ್ ನೀಡಿದೆಯಂತೆ. ಹೀಗಾಗಿ ಸದ್ಯ ಬೆಳೆ ನಷ್ಟ ಅನುಭವಿಸಿರುವ ಮೊರಬ ಗ್ರಾಮದ ರೈತರು ಆತಂಕಕ್ಕೀಡಾಗುವುದರ ಜೊತೆಗೆ ನೋಟಿಸ್ ವಾಪಸ್ ಪಡೆಯುವಂತೆ ಬ್ಯಾಂಕ್‌ಗೆ ಸೂಚನೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈಗಂತೂ ನವಲಗುಂದ ಭಾಗದ ರೈತರು ಮಳೆಯಿಂದ ಬೆಳೆ ನಷ್ಟ ಅನುಭವಿಸಿದ್ದಾರೆ. ಬೆಳೆದ ಬೆಳೆ ನೀರು ಪಾಲಾಗಿದೆ. ವಾಪಸ್ ಬಿತ್ತಬೇಕು ಎಂದರೆ ಭೂಮಿ ಹದ ಇಲ್ಲ. ಇದರ ಜೊತೆಗೆ ಬೀಜ, ಗೊಬ್ಬರಕ್ಕಾಗಿ ರೈತ ಮತ್ತೆ ಸಾಲ ಮಾಡಲೇಬೇಕು. ಹೀಗಿರುವಾಗ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ಬಂದಿರುವುದು ರೈತರನ್ನು ನಿಜಕ್ಕೂ ಆತಂಕಕ್ಕೀಡು ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ ರೈತರ ಪರ ನಿಲ್ಲಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರೈತರಿಗಾಗಿ ಏನನ್ನೂ ಮಾಡಿಲ್ಲ. ಸದ್ಯ ಕಷ್ಟದಲ್ಲಿರುವ ರೈತರ ಸಾಲವನ್ನಾದರೂ ಮನ್ನಾ ಮಾಡಿ ರೈತರ ಪರ ನಿಲ್ಲಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಒಟ್ಟಾರೆ ಧಾರವಾಡದ ನವಲಗುಂದದ ರೈತರಿಗೆ ಈಗಾಗಲೇ ವರುಣ ರಾಯ ಒಂದು ಕಡೆ ಶಾಕ ನೀಡಿದ್ದು, ಇದರ ಮಧ್ಯೆ ಈಗ ಬೆಳೆ ಬರೋ ಮುಂಚೆ ಬ್ಯಾಂಕ್ ಸಾಲ ಮರುಪಾವತಿಗೆ ರೈತರಿಗೆ ನೋಟಿಸ್ ನೀಡಿ ರೈತರನ್ನು ಆತಂಕ ಪಡುವಂತೆ ಮಾಡಿದೆ. ಬ್ಯಾಂಕ್ ಆಫ್ ಬರೋಡಾ ನೋಟಿಸ್ ಹಿನ್ನೆಲೆಯಲ್ಲಿ ಇತರೆ ರೈತರು ಈಗ ನೋಟಿಸ್ ಭೀತಿ ಜಿಲ್ಲೆಯ ಅನ್ನದಾತರಿಗೆ ಭೀತಿ ಮೂಡಿಸಿದೆ. ಆದರೆ ಇದಕ್ಕೆ ಜಿಲ್ಲಾಡಳಿತ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತೋ ಕಾದು ನೋಡಬೇಕಾಗಿದರ.
ಮಂಜುನಾಥ ಡಿ ಇನ್ ನ್ಯೂಸ್ ಧಾರವಾಡ.