ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಗೊಂಡು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಸಾವಿರಕ್ಕೂ ಅಧಿಕ ಜನರು ಇಸಿಜಿ ಮಾಡಿಸಿಕೊಳ್ಳುತ್ತಿದ್ದಾರೆ.
ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ನಿತ್ಯ ಹೆಚ್ಚೆಚ್ಚು ಜನರುಇಸಿಜಿ ತಪಾಸಣೆಗೆ ಬರುತ್ತಿದ್ದಾರೆ ರಾಜ್ಯದ ಐದನೇ ನಂಬರ್ ನಲ್ಲಿ ಬಾಗಲಕೋಟೆ ಇದೆ.
ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯಲ್ಲಿ 3 ಕೇಂದ್ರಗಳದ್ದು,ಬಾಗಲಕೋಟೆ, ಹುನಗುಂದ, ಮುಧೋಳದಲ್ಲಿ ತಪಾಸಣಾ ಕೇಂದ್ರಗಳು ಕಾರ್ಯಾರಂಭ ಮಾಡಿವೆ
ಮೂರು ಕೇಂದ್ರಗಳ ಪೈಕಿ 2024 ಎಪ್ರಿಲ್ ನಿಂದ 2025 ಜೂನ್ 29 ವರೆಗೆ 20, 647 ಜನರಿಗೆ ಇಸಿಜಿ ಮಾಡಲಾಗಿದೆ ಇದರಲ್ಲಿ 144 ಜನರಿಗೆ ಸೆಮಿ ಕ್ರಿಟಿಕಲ್ ಸ್ಥಿತಿ ಇರುವುದು ಪತ್ತೆಯಾಗಿದೆ. ಸೆಮಿ ಕ್ರಿಟಿಕಲ್ ಇರೋರಿಗೆ ಟೆನೆಕ್ಟಾಪ್ಲಸ್ ಚುಚ್ಚುಮದ್ದು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತಿ ತಿಂಗಳು 1 ಸಾವಿರಕ್ಕೂ ಅಧಿಕ ಇಸಿಜಿ ತಪಾಸಣೆಗಳಾಗುತ್ತಿವೆ
ಅದರ ಪೈಕಿ ಶೇ.50 ರಿಂದ 60 ನಾರ್ಮಲ್, ಆದ್ರೆ ಶೇ.40 ರಷ್ಟು ಅಬ್ ನಾರ್ಮಲ್. ಅದರಲ್ಲಿ 30 ರಿಂದ 40 ಕೇಸ್ ಕ್ರಿಟಿಕಲ್ ಇದ್ದರೆ 5 ರಿಂದ 8 ಕೇಸ್ ಸೆಮಿ ಕ್ರಿಟಿಕಲ್ ಗಂಭೀರವಾಗಿರಲಿವೆ. ಹೀಗಾಗಿ ಜನ ಆತಂಕದಲ್ಲಿದ್ದಾರೆ. ಇಸಿಜಿ ತಪಾಸಣೆ ಮಾಡಿಸಿಕೊಳ್ಳೋಕೆ ಬಹುತೇಕ ಸರಾಸರಿ 30 ರಿಂದ 40 ವಯೋಮಾನದವರೇ ಬರುತ್ತಿದ್ದಾರೆ. ಸದ್ಯ ಬೇರೆ ಬೇರೆ ವೈದ್ಯರಿಂದ ಚಿಕಿತ್ಸೆ ಮಾಡಲಾಗುತ್ತಿದೆ ಆದ್ದರಿಂದ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕಾಲಜಿಸ್ಟ್ ವೈದ್ಯರ ಅಗತ್ಯವಿದೆ