ರಾಮದುರ್ಗ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ. ಡಾ.ಭೀಮಾಶಂಕರ್ ಗುಳೇದ್ ಅವರು ತಿಳಿಸಿದ್ದಾರೆ.
ಅವರು ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾದ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಗ್ರಾಮದ ಈರಪ್ಪ ಯಲ್ಲಪ್ಪ ಆಡಿನ್ (35) ಎಂಬ ವ್ಯಕ್ತಿಯನ್ನು ಕೆ. ಜುನ್ನಿಪೇರಿ ಹದ್ದಿಯ ಮಲಪ್ರಭಾ ನದಿಯ ಬೀಜದ ಬಳಿ ಫಕ್ತುಸಾಬ ಮುಜಾವರ ಅವರ ಜಮೀನಿನಲ್ಲಿ ಹತ್ಯೆ ಮಾಡಲಾಗಿತ್ತು. ಮೊದಲೂ ಈರಪ್ಪ ಆಡಿನ್ ಶವ ಗುರುತು ಪತ್ತೆಯಾಗದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಫೋಟೋಗಳನ್ನು ವೈರಲ್ ಮಾಡಿ ಗುರುತು ಪತ್ತೆಗೆ ಮುಂದಾಗಿದ್ದರು. ತನಿಖೆ ವೇಳೆ ಆತ ಜಾಲಿಕಟ್ಟಿ ಗ್ರಾಮದ ನಿವಾಸಿ ಎಂದು ಗುರುತಿಸಲಾಯಿತು. ನಂತರದ ತನಿಖೆಯಲ್ಲಿ ಮೃತನ ಪತ್ನಿ ಕರವ್ವ ಊರ್ಫ ಕಮಲವ್ವ ಈರಪ್ಪ ಆಡಿನ್ ಅವರ ಸಂಶಯಾಸ್ಪದ ವರ್ತನೆ ಬೆಳಕಿಗೆ ಬಂದಿದೆ.
ತೀವ್ರ ವಿಚಾರಣೆಗೊಳಪಡಿಸಿದಾಗ ಸಾಬಪ್ಪ ಲಕ್ಷ್ಮಣ ಮಾದರ ಹಾಗೂ ಫಕೀರಪ್ಪ ಸೋಮಪ್ಪ ಕಣವಿ ಮತ್ತು ಮೃತನ ಪತ್ನಿ ಸೇರಿಕೊಂಡೆ ಈರಪ್ಪನನ್ನು ಬೈಕ್ನಲ್ಲಿ ಅಮ್ಮಿನಭಾವಿಯಿಂದ ಘಟನಾ ಸ್ಥಳದವರೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ತಿಳಿದು ಬಂದಿದೆ. ಈರಪ್ಪನಿಗೆ ಕುಡಿತದ ಚಟವಿದ್ದು, ಹಣಕ್ಕಾಗಿ ಪಿಡಿಸುತ್ತಿದ್ದಂತೆ. ಈ ಹಿನ್ಲೆಲೆ ಕರೆವ್ವ ಕೆಲಸ ಮಾಡುತ್ತಿದ್ದ ಕ್ಯಾಂಟಿನಗೆ ಬರುತ್ತಿದ್ದ ಸಾಬಪ್ಪ, ಫಕೀರಪ್ಪ ಸೇರಿಕೊಂಡು ಆತನ ಎಡಕಿವಿಗೆ ಕಲ್ಲಿನಿಂದ ಹೊಡೆದು, ಕುತ್ತಿಗೆಗೆ ಟಾವೆಲ್ನಿಂದ ಬಿಗಿದು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.