Banglore

ಸಿಎಂ ವಿರುದ್ಧ ಅಪಸ್ವರ ಎತ್ತಿದ್ರೇ ನೋಟಿಸ್; ಡಿಸಿಎಂ ಡಿ.ಕೆ.ಶಿವಕುಮಾರ್ ವಾರ್ನಿಂಗ್…

Share

ಸಿದ್ಧರಾಮಯ್ಯ ಸಿಎಂ ಸ್ಥಾನದಲ್ಲಿರುವಾಗ ಬೇರ್ಯಾರು ಅಪಸ್ವರ ಎತ್ತಬಾರದು. ಈಗಾಗಲೇ ಶಾಸಕ ಇಕ್ಬಾಬ್ ಹುಸೇನ್’ಗೆ ನೋಟಿಸ್ ಕೊಟ್ಟಿದ್ದೇನೆ. ಯಾರೇ ಕೂಡ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದರೇ, ನೋಟಿಸ್ ಕೊಡಬೇಕಾಗುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. 2-3 ತಿಂಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದು ಹೇಳಿಕೆ ನೀಡಿದ್ದ, ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಬ್ ಹುಸೇನ್’ಗೆ ಈಗಾಗಲೇ ನೋಟಿಸ್ ಕೊಟ್ಟಿದ್ದೇನೆ. ಜೊತೆಗೆ ಬೇರೆಯವರಿಗೂ ನೋಟಿಸ್ ಕೊಡಬೇಕಾಗುತ್ತದೆ. ನಮ್ಮ ಪಕ್ಷದಲ್ಲಿ ಯಾರೂ ಕೂಡ ಶಿಸ್ತು ಉಲ್ಲಂಘನೆ ಮಾಡಬಾರದು. ಯಾರೇ ಕೂಡ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದರೇ, ನೋಟಿಸ್ ಕೊಡಬೇಕಾಗುತ್ತದೆ. ನನ್ನ ಹೆಸರನ್ನು ಹೇಳಿ, ಸಿಎಂ ಮಾಡುವ ಅವಶ್ಯಕತೆಯಿಲ್ಲ. ಸಿದ್ಧರಾಮಯ್ಯ ಸಿಎಂ ಸ್ಥಾನದಲ್ಲಿರುವಾಗ ಬೇರ್ಯಾರು ಅಪಸ್ವರ ಎತ್ತಬಾರದು ಎಂದು ಎಚ್ಚರಿಕೆಯನ್ನು ನೀಡಿದರು.

Tags:

error: Content is protected !!