Belagavi

ಗಣೇಶೋತ್ಸವ ಸಮಯದಲ್ಲಿ 24 ಗಂಟೆಗಳ ನಿರಂತರ ವಿದ್ಯುತ್ ಸರಬರಾಜು; ಹೆಸ್ಕಾಂನ ಅಧಿಕಾರಿ ಮನೋಹರ ಸುತಾರ

Share

ಬೆಳಗಾವಿ: ಸಾರ್ವಜನಿಕ ಗಣೇಶೋತ್ಸವ ಸಮಯದಲ್ಲಿ ನಿರಂತರವಾಗಿ 24 ಗಂಟೆಗಳ ಕಾಲ ಯಾವುದೇ ಅವಘಡಗಳಿಗೆ ಅವಕಾಶ ನೀಡದೆ ಶೇ 100 ರಷ್ಟು ವಿದ್ಯುತ್ ಸರಬರಾಜು ಮಾಡಲಾಗುವುದೆಂದು ಹೆಸ್ಕಾಂನ ಅಧಿಕಾರಿ ಮನೋಹರ ಸುತಾರ ಗಣೇಶೋತ್ಸವ ಮಂಡಳಿಗೆ ಭರವಸೆ ನೀಡಿದರು

ಬುಧವಾರ ಬೆಳಗಾವಿಯಲ್ಲಿ ಹೆಸ್ಕಾಂ, ಮಧ್ಯವರ್ತಿ ಶ್ರೀ ಗಣೇಶೋತ್ಸವ ಮಹಾಮಂಡಳ ಮತ್ತು ಲೋಕಮಾನ್ಯ ಗಣೇಶೋತ್ಸವ ಮಹಾಮಂಡಳದ ಸಂಯುಕ್ತಾಶ್ರಯದಲ್ಲಿ ಜರುಗಿದ ಸಭೆಯಲ್ಲಿ ಶಹಾಪೂರದ ನಾರ್ವೇಕರ ಗಲ್ಲಿಯ ಬಾಲ ಗಣೇಶ ಉತ್ಸವ ಸಂಘದ ಸದಸ್ಯರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಮಂಡಳದವರು ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಅವುಗಳನ್ನು ತೆಗೆದುಕೊಂಡು ಕೆಲಸ ನಿರ್ವಹಣೆ ಮಾಡುವುದರ ಜೊತೆಗೆ ಲೈನ್ ಮೇನಗಳು ಹಗಲು ರಾತ್ರಿ ಎನ್ನದೆ ಮಳೆಗಾಲ ಕೆಲಸ ಮಾಡುತ್ತಿದ್ದಾರೆ ಅವರ ಸುರಕ್ಷತೆಯು ಮುಖ್ಯವಾಗಿದೆ ಎಂದರು.ಹೆಸ್ಕಾಂನ ಅಧಿಕಾರಿಗಳು ಸಭೆಯಲ್ಲಿ ಮಾತನಾಡಿ ನಗರದಲ್ಲಿ ಎಲ್ ಟಿಗಳ ಕೆಲಸಗಳು ನಡೆಯುತ್ತಿವೆ ಗಣೇಶೋತ್ಸವ ಮಂಡಳದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ಮೀಟರ್ ಅನುಮತಿ ಪಡೆಯಲು ಕೆಲವೊಂದು ಪೊಲೀಸ್ ಠಾಣೆಗಳಲ್ಲಿ ನಮ್ಮ ಹೆಸ್ಕಾಂನ ಸಿಬ್ಬಂದಿಗಳಿರುತ್ತಾರೆ ಅಲ್ಲಿಯೇ ಮೀಟರಗೆ ತಕ್ಷಣ ಅನುಮತಿ ನೀಡುತ್ತಾರೆ ಎಂದರು.

 

ಇನ್ನು ಮಹಾಮಂಡಳದ ಅಧ್ಯಕ್ಷರಾದ ವಿಜಯ್ ಜಾಧವ್ ಅವರು ಬಾಕಿಯಿದ್ದ ಹೆಸ್ಕಾಂ ಇಲಾಖೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಚರ್ಚಿಸಲಾಗಿದೆ. ಈ ಬಾರಿ ಹೆಸ್ಕಾಂ ಗಣೇಶೋತ್ಸವ ಪೂರ್ವದಲ್ಲಿ ಸಂಯುಕ್ತ ಸಭೆ ನಡೆಸಿದೆ. ಶೇ.90 ರಷ್ಟು ಸಮಸ್ಯೆಗಳನ್ನು ನೀಗಿಸಲು ಹೆಸ್ಕಾಂ ಪ್ರಯತ್ನಿಸಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಗಳು ಅತಿ ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದೇ, ಹೆಸ್ಕಾಂನೊಂದಿಗೆ ಸಹಕರಿಸಿಬೇಕು. ಹಿಂದೇ ನಡೆದಂತಹ ಅನಾಹುತಗಳು ನಡೆಯದಂತೆ ಮುಂಜಾಗೃತೆ ವಹಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ನಿರ್ವಿಘ್ನವಾಗಿ ಹಬ್ಬವನ್ನು ಆಚರಿಸಬೇಕೆಂದು ಕರೆ ನೀಡಿದರು.

ಈ ವೇಳೆ ಮಾತನಾಡಿದ ಸಾಗರ ಪಾಟೀಲ್ ಅವರು ಗಣೇಶೋತ್ಸವದ ಹಿನ್ನೆಲೆ ಬೆಳಗಾವಿಯ ಹೆಸ್ಕಾಂ, ಮಧ್ಯವರ್ತಿ ಶ್ರೀ ಗಣೇಶೋತ್ಸವ ಮಹಾಮಂಡಳ ಮತ್ತು ಲೋಕಮಾನ್ಯ ಗಣೇಶೋತ್ಸವ ಮಹಾಮಂಡಳದ ಸಂಯುಕ್ತ ಸಭೆಯನ್ನು ಕರೆದು ಮುಂಬರುವ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆಯನ್ನು ನಡೆಸಲಾಗಿದೆ. ಬೆಳಗಾವಿ ಶಹಾಪೂರ ವಿಭಾಗದಲ್ಲಿ ಅಳವಡಿಸಲಾದ ಸ್ಮಾರ್ಟ್ ಬಾಕ್ಸ್ ತೆರವುಗೊಳಿಸಲು ಕಳೆದ ಬಾರಿಯೇ ಮನವಿ ಮಾಡಲಾಗಿತ್ತು. ಈ ಬಾರಿ ಅದನ್ನು ತೆರವುಗೊಳಿಸುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದರು.

 

ವಿಕಾಸ್ ಕಲಘಟಗಿ, ಮಹಾದೇವ ಪಾಟೀಲ್, ವಿಜಯ ಜಾಧವ್, ನಗರಸೇವಕ ಗಿರೀಶ್ ಧೋಂಗಡಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!