ಚಿಕ್ಕೋಡಿ:ನದಿಗೆ ನೈವೇದ್ಯ ಬಿಡಲು ಹೋಗಿ ಕಾಲು ಜಾರಿ ಬಿದ್ದು ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿತ್ತು.ನಾಲ್ಕು ದಿನದ ಬಳಿಕ ಇವತ್ತು ಶವ ಪತ್ತೆಯಾಗಿದೆ.
ಸಂಗೀತಾ ಶಿವಾಜಿ ಮಾಂಜ್ರೆಕರ(40) ಸಾವನ್ನಪ್ಪಿರುವ ಮಹಿಳೆ ಸಾವನ್ನಪ್ಪಿದಳು.ಕೃಷ್ಣಾನದಿಗೆ ನೈವೇದ್ಯ ಬಿಡಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಅಗ್ನಿಶಾಮಕದಳ ಹಾಗೂ ಎಸ್.ಡಿ.ಆರ್.ಎಫ್ ,ಪೊಲೀಸ್ ಇಲಾಖೆ ತಂಡಗಳು ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಇವತ್ತು ಶವ ಹೋರತಗೆದಿದ್ದಾರೆ. ಮಾಂಜರಿ ಗ್ರಾಮದ ಕೃಷ್ಣಾ ನದಿತೀರದ ಒಂದು ಕಿ.ಮೀ ಅಂತರದಲ್ಲಿ ಶವ ಪತ್ತೆಯಾಗಿದೆ.