BELAGAVI

ಯಾವುದೇ ಅಧಿಕಾರಿಯನ್ನ ಒಂದೇ ವರ್ಷದಲ್ಲಿ ಬದಲಾವಣೆ ಮಾಡುವ ಪದ್ಧತಿ ನಮ್ಮಲ್ಲಿಲ್ಲ…

Share

ಯಮಕನಮರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಕ್ಕೇರಿ ತಾಲೂಕಿನ ಇಂಗಳಗಿಯಲ್ಲಿ ಶ್ರೀರಾಮಸೇನಾ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸಿದ ಘಟನೆಯ ಹಿನ್ನೆಲೆ ಬೇರೆಯಾಗಿದೆ. ಶ್ರೀರಾಮಸೇನೆ ಅಥವಾ ಮುಸ್ಲಿಂ ಯುವಕರ ಜಗಳವಲ್ಲ. ಈಗಾಗಲೇ ಪೊಲೀಸರು ತಮ್ಮ ತನಿಖೆಯನ್ನು ಆರಂಭಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. ಮುನ್ನೆಲೆ ಬಾರದೇ ಬೆಳಗಾವಿ ಜಿಲ್ಲೆಯ ಅಧಿಕಾರಿಗಳನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ವರ್ಗಾವಣೆ ಮಾಡುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ರಾಜಕೀಯವೆಂದರೇ ಆರೋಪಗಳನ್ನು ಮಾಡುವುದು ಸಹಜ. ಎಲ್ಲ ಅಧಿಕಾರಿಗಳು 4 ವರ್ಷ ಸೇವೆ ಸಲ್ಲಿಸಬೇಕೆಂಬುದು ನಮ್ಮ ಆಶಯ. ಯಾವುದೇ ಅಧಿಕಾರಿಯನ್ನ ಒಂದೇ ವರ್ಷದಲ್ಲಿ ಬದಲಾವಣೆ ಮಾಡುವ ಪದ್ಧತಿ ನಮ್ಮಲ್ಲಿಲ್ಲ. ದೆಹಲಿಯಲ್ಲಿ ಅಧಿಕಾರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಸಾರ್ವಜನಿಕ ಸೇವಕರೆಂಬ ಭಾವನೆ ನಮ್ಮಲ್ಲಿದೆ. ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಗಂಭೀರ ವಿಷಯವಲ್ಲ ಎಂದರು. ಬೈಲಹೊಂಗಲ್ ಎಸಿ ಅವರಿಂದ ಸರ್ಕಾರಿ ಜಮೀನನ್ನು ಖಾಸಗಿ ಜಮೀನು ಎಂದು ಪರಿವರ್ತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುವುದು ಎಂದರು.

ಇನ್ನು ದೆಹಲಿಯಲ್ಲಿ ಹಣಕಾಸು ಸಚಿವರ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ನೀಡಿದ ಕರದಲ್ಲಿ ಶೇ. 50 ರಷ್ಟಾದರೂ ನೀಡಬೇಕೆಂದು ಸಿಎಂ ಹೇಳಿದ್ದಾರೆ. ಮಹಾನಗರ ಪಾಲಿಕೆಗೆ ಅನುದಾನವಿಲ್ಲ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಸರ್ಕಾರ ಹಂತಹಂತವಾಗಿ ನೀಡುತ್ತಿದೆ ಎಂದರು. ಅಲ್ಲದೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹದಗೆಟ್ಟ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಯಮಕನಮರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಕ್ಕೇರಿ ತಾಲೂಕಿನ ಇಂಗಳಗಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಆ ಘಟನೆಯ ಹಿನ್ನೆಲೆ ಬೇರೆಯಾಗಿದೆ. ಶ್ರೀರಾಮಸೇನೆ ಅಥವಾ ಮುಸ್ಲಿಂ ಯುವಕರ ಜಗಳವಲ್ಲ. ಈಗಾಗಲೇ ಪೊಲೀಸರು ತಮ್ಮ ತನಿಖೆಯನ್ನು ಆರಂಭಿಸಿದ್ದಾರೆ ಎಂದರು.

ಇನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಬೆಂಗಳೂರು ಭೇಟಿಗೆ ಸಂಬಂಧಿಸಿದಂತೆ ಶಾಸಕರ ಅಸಮಾಧಾನದ ಬಗ್ಗೆ ಚರ್ಚಿಸಲು ಅಥವಾ ಇನ್ನುಳಿದ ವಿಷಯಗಳನ್ನು ಅವರು ಚರ್ಚಿಸಬಹುದು ಎಂದರು. ಸಮಸ್ಯೆಯನ್ನು ಬಗೆಹರಿಸಲು ಸುರ್ಜೆವಾಲಾ ಪ್ರಯತ್ನಿಸುತ್ತಾರೆ ಎಂದರು. ಶಾಸಕ ರಾಜು ಕಾಗೆ ಅವರು ನೀರಾವರಿ ಯೋಜನೆಗೆ ಅನುದಾನ ಬಾರದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಸಚಿವ ಕೆ.ಎನ್. ರಾಜಣ್ಣ ಅವರ ಕ್ರಾಂತಿಯಾಗುತ್ತದೆಂಬ ಹೇಳಿಕೆಯ ಉತ್ತರ ನಮ್ಮ ಬಳಿಯಿಲ್ಲ. ಅವರನ್ನೇ ಕೇಳಬೇಕೆಂದರು.

ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 100 ಕೋಟಿ ರೂಪಾಯಿ ಅನುದಾನ ನೀಡಿದರೂ ತಮ್ಮನ್ನ ಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂಬ ಸಂಸದ ಜಗದೀಶ್ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಸಂಸದ ಜಗದೀಶ್ ಶೆಟ್ಟರ್ ಪ್ರಾಧಿಕಾರದ ಸದಸ್ಯರಿರದ ಕಾರಣ ಅವರನ್ನು ಸಭೆಗಳಿಗೆ ಆಹ್ವಾನಿಸಲಾಗುತ್ತಿಲ್ಲ. ಕಮೀಟಿ ಸ್ಥಾಪನೆಯಾದ ಬಳಿಕ ಅನುದಾನ ನೀಡಿದ್ದಾರೆ. ಮೊದಲೇ ಇದ್ದರೇ ಸದಸ್ಯತ್ವ ನೀಡಬಹುದಿತ್ತು ಎಂದು ಅವರು ಸ್ಪಷ್ಟಪಡಿಸಿದರು.

Tags:

error: Content is protected !!