ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಿಜೆಪಿ ಉಚ್ಚಾಟಿತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಗುಡುಗಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯೇಂದ್ರ ಹಠಾವೋ ಎಂದು ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಬಿಜೆಪಿ ಅಸಮಾಧಾನ ಶಾಸಕರ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ರಾಜ್ಯ ಬಿಜೆಪಿ ಪಕ್ಷ ಐಸಿಯುನಲ್ಲಿ ಇದೆ ಎಂದಿದ್ದಾರೆ. ಇನ್ನೂ ಬಿಜೆಪಿಯಲ್ಲಿ ಅಸಮಾಧಾನ ತುಂಬಿ ತುಳುಕ್ತಾ ಇದೆ, ರಾಜ್ಯದಲ್ಲಿ ನಾಯಕತ್ವ ಸರಿಯಲ್ಲಾ, ಮಿತ್ರಪಕ್ಷ ಜೆಡಿಎಸ್ ಜೊತೆಗೆ ಹೊಂದಾಣಿಕೆ ಇಲ್ಲಾ, ಪ್ರತಿಭಟನೆ ನಡೆಸಿದ್ರೇ 30 ಜನರು ಸೇರುವುದಿಲ್ಲಾ, ಕಲಬುರಗಿ ಗೆ ಹೋಗಬೇಕಾದರೂ ವಿಜಯೇಂದ್ರ ಸಚಿವ ಪ್ರಿಯಾಂಕ ಖರ್ಗೆಯವರ ಅನುಮತಿ ಪಡೆದೆ ಹೋಗ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ವಿಜಯೇಂದ್ರಗೆ ಆಗುತ್ತಿಲ್ಲಾ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ವಿಜಯೇಂದ್ರನಿಗೆ ಯಡಿಯೂರಪ್ಪ ಫೊಕ್ಸ್ ಕೇಸ್ ಹಾಗೂ ವಿಜಯೇಂದ್ರ ನಕಲಿ ಸಹಿ ಹೊರತೆಗೆಯುವ ಬೆದರಿಕೆ ಹಾಕುತ್ತಾರೆ. ಆಗ ವಿಜಯೇಂದ್ರ ಆಯತು ಸರ್ ಎಂದು ಇಬ್ಬರು ಮಾತು ಕೇಳುತ್ತಾರೆ. ಇನ್ನೂ ಮೂರು ವರ್ಷ ಸಿದ್ದರಾಮಯ್ಯ ಸಿಎಂ ಇದ್ದರೆ ರಾಜ್ಯವನ್ನು ಪಶ್ಚಿಮ ಬಂಗಾಳ ಅಥವಾ ಕೆರಳ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಮಾಡಬೇಕು, ಭ್ರಷ್ಟ ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಮುಕ್ತ ಮಾಡಬೇಕಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗುತ್ತಿದೆ, ಆದ್ರೇ, ವಿಜಯೇಂದ್ರ ಮಾತ್ರ ಸಿಎಂ ಸಿದ್ದರಾಮಯ್ಯ, ಡಿಕೆಶಿ ಅನ್ಯೋನ್ಯವಾಗಿ ಇದ್ದಾರೆ ಎಂದರು. ಅದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ವಿಜಯೇಂದ್ರ ಸೇರಲಿ ಎಂದು ಶಾಸಕ ಯತ್ನಾಳ ಆಗ್ರಹಿಸಿದರು.