ಅವಕಾಶ ಇರದಿದ್ದರೂ ನಿವೇಶನಗಳ ಬದಲಾವಣೆಗೆ ಮುಂದಾಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನಡೆಗೆ ಮುಳುಗಡೆ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಬಾಗಲಕೋಟೆ ಮುಳುಗಡೆ ಸಂತ್ರಸ್ಥರಿಗೆ ಮೀಸಲಿರುವ 3ನೇ ಯುನಿಟ್ ನಲ್ಲಿ ನಕ್ಷೆ ಬದಲಿಸಲು ಪ್ರಾಧಿಕಾರ ಮುಂದಾಗಿದೆ
3ನೇ ಯುನಿಟ್ ನಲ್ಲಿ ಸಂತ್ರಸ್ಥರಿಗೆ ಹಂಚಿಕೆ ಮಾಡಲೆಂದು 1635 ಎಕರೆ ಜಮೀನು ಭೂಸ್ವಾಧೀನ ಮಾಡಲಾಗಿದೆ
ಈ ಪೈಕಿ 1556 ಎಕರೆ ಜಮೀನು ಭೂ ಪರಿವರ್ತನೆಯಾಗಿದೆ
1556ರ ಜಮೀನಿನ ಪೈಕಿ 773 ಎಕರೆ ಪ್ರದೇಶ ವಸತಿಗೆ, 43 ಎಕರೆ ವಾಣಿಜ್ಯಕ್ಕೆ ಮೀಸಲು ಇಡಲಾಗಿದೆ
ಆದ್ರೆ ಇದೀಗ ಒಟ್ಟು 200 ಎಕರೆ ಪ್ರದೇಶ ವಾಣಿಜ್ಯ ನಿವೇಶನ ಮಾಡಲು ಹೊರಟಿರೋ ಪ್ರಾಧಿಕಾರದ ನಡೆ ಅಸಮಾಧಾನಕ್ಕೆ ಕಾರಣವಾಗಿದೆ
ನಗರ ಯೋಜನಾ ಪ್ರಾಧಿಕಾರದಿಂದ ಈ ಹಿಂದೆಯೇ ನಕ್ಷೆ ಅನುಮೋದನೆಯಾಗಿದೆ
ಆದ್ರೆ ಈಗ ನಕ್ಷೆ ತಿದ್ದುಪಡಿ ಮಾಡೋದು ನಿಯಮಬಾಹೀರ ಅಂತಿರೋ ಸಂತ್ರಸ್ಥರು.
ನಕ್ಷೆ ಬದಲಿಸಬೇಕೆಂದಾದರೆ ಮತ್ತೇ ಅನುಮತಿ & ನವೀಕರಣ ಕಡ್ಡಾಯ.
ಆದ್ರೆ ಇತ್ತ ಅನುಮತಿ & ನವೀಕರಣ ಮಾಡಿಕೊಳ್ಳದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ.
ನಕ್ಷೆ ಬದಲಾವಣೆ, ನವೀಕರಣಕ್ಕೆ ಯಾವುದೇ ಅರ್ಜಿ ಬಂದಿಲ್ಲವೆಂದು ಪತ್ರ ನೀಡಿರೋ ನಗರ ಯೋಜನಾ ಪ್ರಾಧಿಕಾರ.
ಇವುಗಳ ಮಧ್ಯೆ ಸಧ್ಯ 200 ಎಕರೆ ಪ್ರದೇಶವನ್ನ ವಾಣಿಜ್ಯ ನಿವೇಶನ ಮಾಡ್ತಿರೋ ಪ್ರಾಧಿಕಾರ.ಅಧಿಕಾರಿಗಳು ಜನರಿಗೆ ದಾರಿ ತಪ್ಪಿಸುತ್ತಿದ್ದಾರೆಂದು ಸಂತ್ರಸ್ಥರ ಆಕ್ರೋಶ.ಮರ್ಚೆಂಟ್ ಅಸೋಸಿಯೇಷನ್ ವತಿಯಿಂದ ಅರ್ಜಿ ಬಂದ ಬೆನ್ನಲ್ಲೆ ವಾಣಿಜ್ಯ ನಿವೇಶನ ಮಾಡಲು ಮುಂದಾಗಿರೋ ಅಧಿಕಾರಿಗಳು.ಮತ್ತೊಂದೆಡೆ ವಾಣಿಜ್ಯ ಮಳಿಗೆಗೆ ಮನವಿ ಮಾಡ್ತಿರೋ ಬಾಗಲಕೋಟೆ ಮರ್ಚ್ಂಟ್ ಅಸೋಸಿಯೇಷನ್.
ಜನಪರ ಹಿತ ಕಾನೂನು ತರುವುದು ತಪ್ಪಲ್ಲ.
ಮುಳುಗಡೆಯಾಗಿ ಬಾಗಲಕೋಟೆ ಮಾರ್ಕೆಟ್ ಚದುರಿ ಹೋಗಿದೆ
ಹೀಗಾಗಿ ಈಗ ಒಂದೇ ಕಡೆಗೆ ಕೊಡೋದ್ರಿಂದ ಅತ್ಯಂತ ಅನುಕೂಲ ಆಗಲಿದೆ.
ವ್ಯಾಪಾರದ ಜೊತೆ ಸರ್ಕಾರಕ್ಕೂ ಒಂದು ರೆವಿನ್ಯೂ ಸಿಗಲಿದೆ ಅನುಕೂಲದ ಕೆಲಸ ಮಾಡಲು ಹೊರಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಧನ್ಯವಾದ ಹೇಳಬೇಕು.ಇದು ಬಿಟ್ಟು ವಿರೋಧ ಮಾಡೋದು ಸರಿಯಲ್ಲ ಎಂದ ಬಾಗಲಕೋಟೆ ವ್ಯಾಪಾರಸ್ಥರು.
