ಚಿಕ್ಕೋಡಿ: ಮಳೆಗಾಲ,ಚಳಿಗಾಲ,ಬೆಸಿಗೆ ಕಾಲ ಎನ್ನದೆ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಇವತ್ತು ಜಾಕೆಟ್ ವಿತರಣೆ ಮಾಡುತ್ತಿರುವ ಕಾರ್ಯ ಪ್ರಶಂಸನೀಯ ಎಂದು ಎಸಿ ಸುಭಾಷ ಸಂಪಗಾವಿ ಹೇಳಿದ್ದಾರೆ.
ಅವರು ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಅಲ್ಲಮಪ್ರಭು ಅನ್ನದಾನ ಸಮಿತಿ ಹಾಗೂ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಪತ್ರಕರ್ತರಿಗೆ ಜಾಕೆಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಪತ್ರಕರ್ತರಿಗೆ ಜಾಕೆಟ್ ವಿತರಣೆಯು ಒಳ್ಳೆಯ ಕಾರ್ಯ.ಸದ್ಯ ಮಳೆಗಾಲದಲ್ಲಿ ಪತ್ರಕರ್ತರಿಗೆ ಕಾರ್ಯನಿರ್ವಹಿಸಲು ಜಾಕೆಟ್ ಗಳು ಅನುಕೂಲವಾಗಲಿದೆ.ಇಂತಹ ಸಮಾಜಮುಖಿ ಕಾರ್ಯ ಮಾಡುತ್ತಿರುವ ಅಲ್ಲಮಪ್ರಭು ಅನ್ನದಾನದ ಸಮಿತಿಯ ಹಾಗೂ ಎಲೆಕ್ಟ್ರಾನಿಕ್ ಜರ್ನಲಿಸ್ಟನ ಅಸೋಸಿಯೇಷನ್ ಕಾರ್ಯ ಪ್ರಶಂಸನೀಯ ಎಂದರು.
ಬಳಿಕ ಅಲ್ಲಮಪ್ರಭು ಅನ್ನದಾನ ಸಮಿತಿಯ ಅಧ್ಯಕ್ಷರಾದ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಉತ್ತಮ ಸಮಾಜಕ್ಕಾಗಿ ಹಗಲು-ರಾತ್ರಿ ಎನ್ನದೆ ನಿಸ್ವಾರ್ಥವಾಗಿ ಕೆಲಸ ಮಾಡುವ ಪತ್ರಕರ್ತರಿಗೆ ಇವತ್ತು ಜಾಕೆಟ್ ವಿತರಣೆ ಮಾಡಲು ಸಂತಸ ಎನ್ನಿಸುತ್ತದೆ ಎಂದರು.
ಎಲೆಕ್ಟ್ರಾನಿಕ್ ಜರ್ನಲಿಸ್ಟ್ ಅಸೋಸಿಯೇಷನ್ ನ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ ಪುಠಾಣಿ ಮಾತನಾಡಿ ಅಧ್ಯಕ್ಷನಾದ ಬಳಿಕ ಮೊದಲ ಕಾರ್ಯಕ್ರಮ ಇದಾಗಿದ್ದು,ಪತ್ರಕರ್ತರಿಗೆ ಅನುಕೂಲದ ದೃಷ್ಟಿಯಿಂದ ಈ ಸಂಘಟನೆಯ ಉದ್ದೇಶವಾಗಿದೆ.ಸದ್ಯದ ವಾತಾವರಣದಲ್ಲಿ ಪತ್ರಕರ್ತರಿಗೆ ಜಾಕೆಟ್ ಅತ್ಯಂತ ಅವಶ್ಯಕವಾಗಿದೆ.ಮುಂದಿನ ದಿನಮಾನಗಳಲ್ಲಿ ಪತ್ರಕರ್ತರಿಗೆ ವಿನೂತ ಕಾರ್ಯಕ್ರಮ ಹಮ್ಮಿಕೊಳ್ಳಗುವುದು ಎಂದರು.
ಈ ಸಂಧರ್ಭದಲ್ಲಿ ಎಲೆಕ್ಟ್ರಾನಿಕ್ ಮಿಡಿಯಾದ ಉಪಾಧ್ಯಕ್ಷ ಅಜಿತ ಸಣ್ಣಕ್ಕಿ,ಶಿವಮೂರ್ತಿ ಪಡಲಾಳೆ,ರಣಜೀತ ಶಿಂಧೆ,ಡಾ!ಮಾರುತಿ ಮುಸಳೆ,ಸಂಜು ಪತ್ರಕರ್ತರಾದ ವಿರುಪಾಕ್ಷಿ ಕವಟಗಿ,ರಾಜೇಂದ್ರ ಕೋಳಿ,ಕಾಶಿನಾಥ ಸುಳಕುಡೆ,ಅಜೀತ ಸುತಾರ,ಶಿವಾನಂದ ಪದ್ಮನವರ,ಡಿ.ಕೆ.ಉಪ್ಪಾರ,ಶೈಬಾಜ ಮಕಾನದಾರ,ಸಂಜು ಅರಬಾಂವಿ, ಸಂಜಯ ಕೌಲಗಿ,ದುಂಡಯ್ಯ ಭಾವಿಮನಿ,ರಘು ಲಿಂಬಿಗಿಡದ,ಉತ್ತಮ ಅರಭಾವಿ,ಲಕ್ಷ್ಮಣ ಕೋಳಿ,ಸಚಿನ ಜಮಖಂಡಿ,ಅಜೀತ ಸುತಾರ,ರವಿ ಮಂಗಾವೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.