ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿದಂತೆ ದೇಶದಾದ್ಯಂತ ಹಲವು ವಿಮಾನ ನಿಲ್ದಾಣಗಳಿಗೆ, ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಇಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭಾನುವಾರ ತಡರಾತ್ರಿವರಿಗೂ ಪೊಲೀಸರು ಪರಿಶೀಲನೆ ನಡಸಿದರು.
ಕರ್ನಾಟಕ ರಾಜ್ಯದ ಕೇಲ ವಿಮಾನ ನಿಲ್ದಾಣಗಳಿಗೆ ಸಹ ಬಾಂಬ್ ಬೆದರಿಕೆ ಹಾಕಲಾಗಿದ್ದು ಅಪರಿಚತರು ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿದ್ದರು.
ಬಾಂಬ್ ಬೆದರಿಕೆ ಇಮೇಲ್ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಶ್ವಾನ ದಳ, ಬಾಂಬ್ ಸ್ಟ್ರಾಡ್ ನಿಂದ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ ಇದೊಂದು ಹುಸಿ ಬಾಂಬ್ ಕರೆ ಎನ್ನಲಾಗಿದೆ.