ಹುಕ್ಕೇರಿ ತಾಲೂಕಿನ ಹುಲ್ಲೋಳಿ – ಬೆಳವಿ ರಸ್ತೆ ಸುಧಾರಣೆ ಮಾಡುವಂತೆ ಆಗ್ರಹಿಸಿ ಹಸಿರು ಸೇನೆ ರೈತ ಸಂಘಟನೆ ವತಿಯಿಂದ ಪಂಚಾಯತ ರಾಜ್ಯ ಇಲಾಖೆ ಎದುರು ಧರಣಿ ನಡೆಸಿ ಪ್ರತಿಭಟನೆ ಮಾಡಲಾಯಿತು.
ತಾಲೂಕಿನ ಹುಲ್ಲೋಳ್ಳಿ ಗ್ರಾಮದಿಂದ ಬೆಳವಿ ಗ್ರಾಮಕ್ಕೆ ತೇರಳುವ ರಸ್ತೆ ಹದೆಗೆಟ್ಟಿದ್ದರಿಂದ ಬಸ್ ಸಂಚಾರ ಬಂದ್ ಮಾಡಲಾಗುದೆ ಇದರಿಂದಾಗಿ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ತಾಲೂಕಾ ಹಸಿರು ಸೇನೆ ರೈತ ಸಂಘಟನೆಯ ಅದ್ಯಕ್ಷ ಸಂಜಿವ ಹಾವನ್ನವರ ನೇತೃತ್ವದಲ್ಲಿ ರೈತರು ಪಂಚಾಯತ ರಾಜ್ಯ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಸಂಜೀವ ಗ್ರಾಮಿಣ ಭಾಗದ ರಸ್ತೆ ಸುಧಾರಣೆಗೆ ಆಗ್ರಹಿಸಿ ಕಳೆದ ನಾಲ್ಕು ತಿಂಗಳಿನಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ನಮ್ಮ ಮನವಿಗೆ ಸ್ಪಂದನೆ ಇಲ್ಲಾ ,ಪೋನ್ ಮಾಡಿದರೆ ಸರುಯಾದ ಸ್ಪಂದನೆ ಇಲ್ಲಾ ಎಂದು ಆರೋಪಿಸಿ ರಸ್ತೆ ಕೂಡಲೆ ರಿಪೇರಿ ಮಾಡಿ ಬಸ್ ಸಂಚಾರ ಪ್ರಾರಂಬಿಸುವಂತೆ ಆಗ್ರಹಿಸಿದರು
ಸ್ಥಳಕ್ಕೆ ಪಂಚಾಯತ್ ರಾಜ್ಯ ಇಲಾಖೆ ಅಭಿಯಂತರ ಶಶಿಕಾಂತ ವಂದಾಳೆ ಆಗಮಿಸಿ ರೈತರೊಂದಿಗೆ ಸಮಾಲೋಚನೆ ಮಾಡಿ ತಾಲೂಕಾ ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಟಿ ಆರ್ ಮಲ್ಲಾಡದ ಜೋತೆ ಪೋನ್ ಮೂಲಕ ಸಂಭಾಷಣೆ ಮಾಡಿ ಎರಡು ದಿನದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವದು ಎಂದು ಭರವಸೆ ನೀಡಿದ ಮೇಲೆ ರೈತರು ಕಚೇರಿ ಬಾಗಿಲು ತೇರೆದು ಅನವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ
ನಾಗರಾಜ ಹಾದಿಮನಿ, ಸುರೇಶ ಗಸ್ತಿ, ರವಿ ಚಿಕ್ಕೋಡಿ, ಸುಧೀರ ಪಾಟೀಲ, ರವಿ ಬೋರಗಲ್ಲಿ ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.