Dharwad

ಧಾರವಾಡದ “ಲಕಮಾಪುರಕ್ಕೆ ಶಾಶ್ವತ ರುದ್ರಭೂಮಿ ಸೌಲಭ್ಯಕ್ಕೆ ಆಗ್ರಹ… ಧಾರವಾಡ ಡಿಸಿಯವರಿಗೆ ಒತ್ತಾಯ ಮಾಡಿದ ಗ್ರಾಮಸ್ಥರು

Share

ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ರುದ್ರಭೂಮಿ ಸಮಸ್ಯೆ ಎದುರಾಗಿದ್ದು, ತಮಗೆ ಶಾಶ್ವತ ರುದ್ರಭೂಮಿ ನೀಡುವಂತೆ ಲಕಮಾಪುರ ಗ್ರಾಮಸ್ಥರು ಡಿಸಿ ಅವರಿಗೆ ಒತ್ತಾಯ ಮಾಡಿದ್ದಾರೆ.

ಹೌದು ಹಿಂದಿನಿಂದಲೂ ಲಕಮಾಪುರ ಗ್ರಾಮದಲ್ಲಿ ಯಾವುದಾದರೂ ನಿಧನರಾದ್ರೆ, ಅದನ್ನು ಅದೇ ಗ್ರಾಮದ ಹುಬ್ಬಳ್ಳಿ ಎಂಬುವವರ ಜಮೀನಿನಲ್ಲಿ ಸಂಸ್ಕಾರ ಮಾಡುತ್ತ ಬರಲಾಗುತ್ತಿತ್ತು. ಈಗ ಹೊಲದ ಮಾಲೀಕರು ತಮ್ಮ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲು ಬಿಡುತ್ತಿಲ್ಲ. ಹೀಗಾಗಿ ಲಕಮಾಪುರ ಗ್ರಾಮದ ಹಿಂದೂ ಸಮಾಜದ ಜನರಿಗೆ ಶಾಶ್ವತ ರುದ್ರಭೂಮಿಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಲಕಮಾಪುರ ಗ್ರಾಮಸ್ಥರು ಮೊನ್ನೆಯಷ್ಟೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಬಳಿಕ ಸ್ಥಳಕ್ಕೆ ಪಿಡಿಓ ಹಾಗೂ ಪೊಲೀಸ್ ಇಲಾಖೆಯವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ಆಗಲೂ ಕೂಡ ಗ್ರಾಮಸ್ಥರು ತಮಗೆ ಶಾಶ್ವತ ರುದ್ರಭೂಮಿ ವ್ಯವಸ್ಥೆ ಮಾಡಿಕೊಡಲೇಬೇಕು. ಊರಲ್ಲಿ ಯಾರಾದರೂ ತೀರಿಕೊಂಡರೆ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಈ ಕೂಡಲೇ ತಮ್ಮ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

Tags:

error: Content is protected !!