ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಚರಂಡಿಗಳ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ಮಾಜಿ ಉಪಮಹಾಪೌರ ಹಾಗೂ ಹಾಲಿ ನಗರಸೇವಕಿ ರೇಷ್ಮಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಇಂದು ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಚರಂಡಿಗಳ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ಚರಂಡಿಗಳಿಗೆ ಕಸ ಎಸೆದರೆ ನದಿ, ಕಾಲುವೆಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬುದನ್ನು ಮನವರಿಕೆ ಮಾಡುತ್ತ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ನಿರಂತರ ಮುಂದಾಗಿದ್ದಾರೆ. ಮನೆ ಬಾಗಿಲಿಗೆ ಬರುವ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ತ್ಯಾಜ್ಯ ವಿತರಿಸಬೇಕು, “ಗ್ರಾಮ ಪಂಚಾಯಿತಿಯು ಜನಸಂಖ್ಯೆಗೆ ಅನುಗುಣವಾಗಿ ತ್ಯಾಜ್ಯ ವಿಲೇವಾರಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಈ ಮೂಲಕ ಪರಿಸರದ ಶುಚಿತ್ವವನ್ನು ಕಾಪಾಡಲು ಸಹಕಾರ ದೊರೆಯುತ್ತದೆ,” ಎಂದು ಸಮಾಜ ಸೇವಕ ಆದಿತ್ಯ ಪಾಟೀಲ್ ಹೇಳಿದರು.