ಯುವಕರು ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೂ ಪ್ರಧಾನಿ ಉತ್ತಮ ಆಡಳಿತ ನೀಡಿ ಯಶಸ್ವಿ ಪ್ರಧಾನ ಮಂತ್ರಿಗಳಾಗಿದ್ದಾರೆಂದು ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಹೇಳಿದರು
ಬುಧವಾರ ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ
ಕಳೆದ 75 ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಯುವಕರು ಕೃಷಿಕರು ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಿದ್ದಾರೆ ಅವರೊಬ್ಬ ಯಶಸ್ವಿ ಪ್ರಧಾನ ಮಂತ್ರಿಗಳಾಗಿ ಆಪರೇಷನ್ ಸಿಂಧೂರ ಮೂಲಕ ರಾಷ್ಟ್ರೀಯ ಭದ್ರತೆಗೂ ದೊಡ್ಡ ಶಕ್ತಿ ತುಂಬಿದ್ದಾರೆ. 370 ವಿಧಿ ರದ್ದತಿ, ರಾಮಮಂದಿರದ ನಿರ್ಮಾಣ, ಹರ ಘರ್ ಜಲ್ ಯೋಜನೆಯ ಮೂಲಕ ಮನೆ ಮನೆಗೆ ಕುಡಿಯುವ ನೀರನ್ನು ತಂದುಕೊಟ್ಟಿದ್ದಾರೆ. ಅವರ ನೇತೃತ್ವದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ ಅಂದರು
ಮಹದಾಯಿ ಯೋಜನೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,
ಮಹದಾಯಿಗೆ ಕಾಂಗ್ರೆಸ್ನವರು ಗೋಡೆ ಕಟ್ಟಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಅರಣ್ಯ ಇಲಾಖೆ ಒಪ್ಪಿಗೆ ನೀಡಿತ್ತು ಸರ್ಕಾರ ಹಣ ತೆಗೆದಿರಿಸಿ ಯೋಜನೆ ಆರಂಭಿಸಲಾಗಿತ್ತು.ಆದರೆ ಕಾಂಗ್ರೆಸ್ನವರು ಕೋರ್ಟಿಗೆ ಅಫಿಡೆವಿಟ್ ಕೊಟ್ಟು ನಾವು ಮಾಡಿದ್ದ ನಾಲೆಗೆ ಗೋಡೆ ಕಟ್ಟುವ ಕೆಲಸವನ್ನು ಕಾಂಗ್ರೆಸ್ ನವರು ಮಾಡಿದ್ದಾರೆ. ಈಗ ಟ್ರಿಬುನಲ್ ನಲ್ಲಿ ಇದ್ದು ಹಂತ ಹಂತವಾಗಿ ಬಗೆ ಹರಿಯಲಿದೆ ಎಂದರು.
ಸಮಗ್ರ ಕರ್ನಾಟಕದ ಅಭಿವೃದ್ಧಿ ಅಗತ್ಯವಿದೆ ಬೆಳಗಾವಿ, ಧಾರವಾಡ ಹುಬ್ಬಳ್ಳಿ ಒಂದು ಕ್ಲಸ್ಟರ್ ಆಗಿ ಅಭಿವೃದ್ಧಿ ಮಾಡಬೇಕಾಗಿದೆ ಅವುಗಳ ಮೂಲಕ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲು ಸಾಧ್ಯ ಮುಂಬೈ ಚೆನ್ನೈ ಕೈಗಾರಿಕಾ ಕ್ಲಸ್ಟರ್ ಆಗುತ್ತಿರುವುದು ಕಿತ್ತೂರು ಹತ್ತಿರ, ಅದರ ಲಾಭ ಬೆಳಗಾವಿ ಧಾರವಾಡ ಹುಬ್ಬಳ್ಳಿಗೆ ಸಿಗಲಿದೆ. ಬೆಳಗಾವಿ ಹುಬ್ಬಳ್ಳಿ ಏರ್ಪೋರ್ಟ್ ಗಳು ಸುಧಾರಣೆ ಆಗುತ್ತಿವೆ. ಧಾರವಾಡ ಬೆಳಗಾವಿ ರೈಲ್ವೆ ಯೋಜನೆ ಕೂಡ ಇದಕ್ಕೆ ಪೂರಕವಾಗಲಿದೆ. ಬೆಳಗಾವಿಂದ ಬೆಂಗಳೂರಿಗೆ ವಂದೇ ಭಾರತ ರೈಲು ಶೀಘ್ರ ಆರಂಭವಾಗಲಿದೆ ಎಂದರು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ
ಅವರ ಹೆಸರಿನಲ್ಲಿರುವ 240 ಕೋಟಿ ದುಡ್ಡನ್ನು ಹೊಡೆದು ಚುನಾವಣೆಗೆ ಉಪಯೋಗಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಬಳ್ಳಾರಿ ಜಿಲ್ಲೆಯಾದ್ಯಂತ ಇಡಿ ಎಂಪಿ ಎಂ ಎಲ್ ಎ ಗಳ ಮನೆಗಳ ಮೇಲೆ ದಾಳಿ ಮಾಡಿದೆ. ಬರುವ ದಿನಗಳಲ್ಲಿ ಅದರಲ್ಲಿ ಭಾಗಿಯಾದವರ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಶಿಕ್ಷೆ ಆಗಲಿದೆ ಎಂಬ ಭರವಸೆ ನನಗಿದೆ. ಕಾಂಗ್ರೆಸ್ ಸರ್ಕಾರ ಮಾಡುವುದೊಂದು ಹೇಳುವುದೊಂದು ಮಾಡುತ್ತಿದೆ ಸರ್ಕಾರ ವಾಲ್ಮೀಕಿ ಮತ್ತು ಮುಡಾ ಹಗರಣದ ಆರೋಪಿಗಳಿಗೂ ಕೂಡ ಶಿಕ್ಷೆ ಆಗಲಿದೆ ಅದು ಸಿಎಂ ಕುತ್ತಿಗೆಗೂ ಬರಲಿದೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ವಿಶ್ವನಾಥ್ ಪಾಟೀಲ್, ಸಂಜಯ್ ಪಾಟೀಲ್, ಅನಿಲ್ ಬೆನಕೆ, ಜಿಲ್ಲಾಧ್ಯಕ್ಷ ಶುಭಾಷ್ ಪಾಟೀಲ್, ಗೀತಾ ಸುತಾರ್, ಹನುಮಂತ ಕೊಂಗಾಲಿ, ಮುರುಘೇಂದ್ರಗೌಡ ಪಾಟೀಲ ಇತರ ಮುಖಂಡರು ಉಪಸ್ಥಿತರಿದ್ದರು.