ಬೆಳಗಾವಿ : ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಅರ್ಥಾತ್ ಈದ್ ಉಲ್ ಅಝಹಾ ಹಬ್ಬವನ್ನು ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿಯಲ್ಲಿ ಮುಸ್ಲಿಂ ಬಾಂಧವರು ಅತ್ಯುತ್ಸಾಹದಿಂದ ಆಚರಿಸಿದರು.
ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಅದಾ ಮಾಡಿ, ಶಾಂತಿ ಸೌಹಾರ್ದತೆಗಾಗಿ ಪ್ರಾರ್ಥಿಸಿದರು. ಸಾವಿರಾರು ಜನ ಮುಸ್ಲಿಂ ಬಾಂಧವರು ಈ ವೇಳೆ ಭಾಗಿಯಾಗಿದ್ದರು. ಪರಸ್ಪರ ಬಕ್ರೀದ್ ಶುಭಾಷಯಗಳನ್ನು ವಿನಿಯೋಗಿಸಿಕೊಂಡರು. (ಫ್ಲೋ)