Bailahongala

ಬೈಲಹೊಂಗಲ : ಸವದತ್ತಿ ತಾ. ಹಾರುಗೊಪ್ಪ ಗ್ರಾಮದಲ್ಲಿ ಧಾರಾಕಾರ ಮಳೆ….

Share

ಬೈಲಹೊಂಗಲ ಮತ ಕ್ಷೆತ್ರದ ಸವದತ್ತಿ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ ನಿನ್ನೆ ಸುರಿದ ಮಳೆಗೆ ಅಪಾರ ಹಾನಿ ಆಗಿದ್ದು ಗ್ರಾಮಕ್ಕೆ ಸಂಪರ್ಕ ಹೊಂದಿಕೊಂಡಿರುವ ರಸ್ತೆ ಗಳು, ನೀರು ಹೊಕ್ಕು ಕಿತ್ತು ಹೋಗಿದೆ, ಈಗ ಎಲ್ಲಾ ರಸ್ತೆ ಗಳು ಸಂಪರ್ಕಗಳು ಬಂದು ಆಗಿದೆ,

ಹೊಲದಲ್ಲಿರುವ ಬೆಳೆಗಳು, ಕಬ್ಬಿನ ತೋಟಕ್ಕೆ ನೀರು ಹೊಕ್ಕು ಎಲ್ಲಾ ಕಬ್ಬು ಗಳು ನೆಲಕ್ಕೆ ಉರಿಳಿದೆ, ಹೊಲದಲ್ಲಿ ಮೆಣಿಸಿನ ಬೆಳೆ, ಡಬ್ಬುಕಾಯಿ ಬೆಳೆ, ನೀರು ಹೊಕ್ಕು ಎಲ್ಲಾ ಬೆಳೆ ಹಾಳಾ ಆಗಿದೆ, ಈಗ ತಾನೇ ಗ್ರಾಮದ ಜನರು ಹೆಸರು ಕಾಳು, ಹಾಗೂ ಉದ್ದಿನ ಕಾಳು, ಹಾಗೂ ಹತ್ತಿ ಕಾಳು, ಸೋಯಾಬಿನ, ಬೆಳೆ ಮೊನ್ನೆ ದಿನ ಮಳೆ ಚನ್ನಾಗಿ ಆಗಿರೋ ಕಾರಣ ಎಲ್ಲಾ ಗ್ರಾಮದ ಜನರು ಭೂಮಿ ಯನ್ನು ಸಾಕಷ್ಟು ಗೊಬ್ಬರ ಹಾಕಿ, ಭೂಮಿಯನ್ನು ಬೆಳೆಗೆ ಹದ ಮಾಡಿ ಬಿತ್ತನಿಕೆ ಮಾಡಿದ್ದರು, ಈಗ ರೈತರಿಗೆ ಬಸಲು ಬೆಳೆ ಸಿಗದೆ ಬಾರಿ ಸಕಷ್ಟದಲ್ಲಿ ಸಿಲುಕಿದ್ದಾರೆ, ಹಾಗೂ ಎಲ್ಲಾ ಹೊಲದಲ್ಲಿ ನೀರು ಹೊಕ್ಕು ಸಂಪೂರ್ಣವಾಗಿ ಹಾಳಾಗಿದೆ,

ಹಾರುಗೋಪ್ಪ ಗ್ರಾಮದಲ್ಲಿ ಕೆರೆ ಕೆಲವು ದಿನಗಳ ಹಿಂದೆ ಮಾನ್ಯ ಶಾಸಕರು ಶ್ರೀ ಮಹಾಂತೇಶ ಕೌಜಲಗಿ ಯವರು ಅನುದಾನದಲ್ಲಿ ಕೆರೆ ನಿರ್ಮಾಣ ಮಾಡಿರುವ ಕೆರೆ ಇದ್ದು ನಿನ್ನೆ ಸುರಿದು ಮಳೆಗೆ ಅಪಾರ ಮಟ್ಟದಲ್ಲಿ ನೀರು ಸಹಗ್ರವಾಗಿದ್ದು ಈಗ ಅದೇ ಕೆರೆ ನೀರು ಹೆಚ್ಚು ಆಗಿರೋ ಕಾರಣ ಕೆರೆ ಎಲ್ಲಾ ಕಡೆ ಬಿರುಕು ಬಿಟ್ಟು ಹೊರಗೆ ಬರುತ್ತಿದೆ, ಕೆರೆ ಯಾವ ಸಮಯದಲ್ಲಿ ಕೂಡ ಓಡೆದು ಹೋಗವ ಸ್ಥಿತಿ ಬಂದು ತೊಡಗಿದೆ, ಈ ಕೆರೆ ಓಡೆದೆರೆ ಅಪಾಯ ಕಟ್ಟಿ ಇಟ್ಟ ಬುತ್ತಿ, ಗ್ರಾಮದ ಜನರಿಗೆ ಇದೆ ಕೆರೆ ಬಹಳ ಆಸರೆ ಆಗಿದ್ದು ಕುಡಿಯಲು ಗ್ರಾಮಕ್ಕೆ ನೀರು ಬಳಸಲು ಇದೆ ಕೆರೆ ಆಸರೆಯಾಗಿದೆ, ಆದ ಕಾರಣ ಗ್ರಾಮದ ಜನರಿಗೆ ಸರ್ಕಾರ ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಜನರಿಗೆ ಸರ್ಕಾರದಿಂದ ಬರುವ ಪರಿಹಾರವನ್ನು ಒದಗಿಸಿಕೊಡಬೇಕೆಂದು ಜನರ ಆಶಯ ಗ್ರಾಮದ ಕೋರಿಕೆ ಅಗ್ರಹವಾಗಿದೆ.

Tags:

error: Content is protected !!