Bailahongala

ಸ್ವಂತ ಖರ್ಚಿನಲ್ಲಿ ಶಾಲೆಗೆ ಬೋರವೆಲ್ ಕೊರೆಯಿಸಿ ಮಾದರಿಯಾದ ಬೈಲಹೊಂಗಲ ಸರ್ಕಾರಿ ಶಾಲಾ ಶಿಕ್ಷಕಿ

Share

ಬೈಲಹೊಂಗಲ್ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಹೆಣ್ಣು ಮಕ್ಕಳ ಶಾಲೆ ನಂ 2 ರ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಅದೇ ಶಾಲೆಯ ಶಿಕ್ಷಕಿಯಾದ S M ರಾಯಬಾಗಿ ಅವರು ಸ್ವಂತ 80,000 ಸಾವಿರ ರೂಪಾಯಿ ಖರ್ಚು ಮಾಡಿ ತಾವು ಬೋಧಿಸುವಂಥ ಶಾಲಾ ಮಕ್ಕಳ ನೀರಿನ ಸಮಸ್ಯೆಯನ್ನು ಬೋರವೆಲ್ ಕೊರೆಸಿ ಹೋಗಲಾಡಿಸಿದ್ದಾರೆ

ಹಾಗೂ ಬೋರವೆಲ್ ಕೊರೆಸಿ ನೀರು ಬಂದ ನಂತರ ಅದಕ್ಕೆ ತಗಲುವಂತ ಸಾಮಗ್ರಿಗಳನ್ನು ಇವರೇ ಖರೀದಿ ಮಾಡಿ ತಕ್ಷಣವೇ ಮಕ್ಕಳಿಗೆ ಶಾಶ್ವತ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ

ಇವರಿಗೆ ತಮ್ಮ ಸಹಶಿಕ್ಷಕರು ಕೂಡ ತುಂಬಾನೇ ಬೆಂಬಲ ನೀಡಿ ಈ ಕೆಲಸಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ

ಬೋರ್ ವೆಲ್ ನೀರು ಸರಿಸುಮಾರು ಎರಡು ಇಂಚಿನಷ್ಟು ನೀರು ಬಿದ್ದಿದ್ದು ಮಕ್ಕಳ ಮತ್ತು ಶಿಕ್ಷಕರು ದೊಡ್ಡಮಟ್ಟದ ಖುಷಿ ವ್ಯಕ್ತಪಡಿಸಿದರು

ಬೋರ್ವೆಲ್ ನೀರು ಬಿದ್ದ ತಕ್ಷಣವೇ ಶಾಲೆಯ ಮಕ್ಕಳು ಕುಣಿದು ಕುಪ್ಪಳಿಸಿದರು

ಇದೇ ಶಾಲೆಯಲ್ಲಿ ಸರಿಸುಮಾರು 200 ವಿದ್ಯಾರ್ಥಿಗಳು ಕಲಿಯುತ್ತಿದ್ದು ಹಾಗೂ 9 ಶಿಕ್ಷಕರು ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ

ಶಾಲೆಯ ಶಿಕ್ಷಕಿಯಾದ S M ರಾಯಬಾಗಿ ಯವರಿಗೆ ಸಹಶಿಕ್ಷಕರು,ಶಾಲೆಯ SDMC ಸದಸ್ಯರು ಮತ್ತು ಬೈಲಹೊಂಗಲ ಶಿಕ್ಷಣಾಧಿಕಾರಿ AN ಪ್ಯಾಟಿ ಹಾಗೂ ಸ್ಥಳೀಯ ಜನರು ಬೆಂಬಲವಾಗಿ ನಿಂತು ಇವರ ಈ ಕೆಲಸಕ್ಕೆ ಹರ್ಷ ವ್ಯಕ್ತಪಡಿಸಿದರು

ಇದೇ ಸಂದರ್ಭದಲ್ಲಿ ಮಾತನಾಡಿದಂತ SM ರಾಯಬಾಗಿ ಶಾಲೆಯ ಮಕ್ಕಳು ನೀರಿನ ಸಮಸ್ಯೆಯನ್ನು ಸಾಕಷ್ಟು ದಿನಗಳಿಂದ ಎದುರಿಸುತ್ತಿದ್ದರು

ಹೀಗಾಗಿ ಇವರಿಗೆ ಶಾಶ್ವತವಾಗಿ ನೀರಿನ ಸಮಸ್ಯೆ ಹೋಗಲಾಡಿಸಲು ನಾನೊಂದು ಚಿಕ್ಕ ಸಹಾಯ ಮಾಡಿದ್ದೇನೆ

ಇದಕ್ಕೆ ನನ್ನ ಸಹ ಶಿಕ್ಷಕರು ಕೂಡ ತುಂಬಾನೇ ಬೆಂಬಲವಾಗಿ ನಿಂತು ಈ ಬೋರವೆಲ್ ಕೊರೆಸುವ ಕೆಲಸ ಯಶಸ್ವಿಯಾಗಿದೆ
ಎಂದು ಹೇಳಿದರು

ನಾನು ಮಾಡಿರುವ ಈ ಕೆಲಸ ಚಿಕ್ಕದ್ದು ಇದಕ್ಕೆ ತುಂಬಾನೇ ಬೆಂಬಲ ನೀಡಿದ ಶಾಲೆಯ ಸಹಶಿಕ್ಷಕರು ಮತ್ತು SDMC ಸದಸ್ಯರು ಹಾಗೂ ತಾಲೂಕಿನ ಶಿಕ್ಷಣಾಧಿಕಾರಿ AN ಪ್ಯಾಟಿ

ಬೋರ್ ವೆಲ್ ಕೋರೆಸುವ ಸಂದರ್ಭದಲ್ಲಿ ಶಾಲೆಯ ಸಹಶಿಕ್ಷಕರಾದ
ಶ್ರೀಮತಿ ಪ್ರಧಾನ ಶಿಕ್ಷಕಿ SM ಕೀಲೆದಾರ ಸಹ ಶಿಕ್ಷಕರಾದ SS ಮುಲ್ಲಾ,CD ಶಿವನಾಯ್ಕರ
SA ನದಾಪ RS ಉಳ್ಳೆಗಡ್ಡಿ SM ರಾಯಬಾಗಿ NG ಮುಲ್ಲಾ KA ಮಕಾನದಾರ AB ಅಂಗಡಿ ಹಾಗೂ SDMC ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು

Tags:

error: Content is protected !!