ಆಪರೇಷನ್ ಸಿಂಧೂರ ಬಳಿಕ ಭಾರತ ಹಾಗೂ ಪಾಕ್ ನಡುವೆ ಯುದ್ದದ ಸನ್ನಿವೇಶ ಏರ್ಪಟ್ಟಿದೆ. ಅದರಲ್ಲೂ ನಿನ್ನೆ ರಾತ್ರಿಯಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಇಂತಹ ಸಮಯದಲ್ಲಿ ಪಾಕಿಸ್ತಾನದ ಪರ ಪೊಸ್ಟ್ ಹಾಕಿದ ವಿದ್ಯಾರ್ಥಿನಿ ವಿರುದ್ಧ ದೂರು ದಾಖಲಾಗಿದೆ. ವಿಜಯಪುರ ನಗರದ ತಿಕೋಟಾ ತಾಲ್ಲೂಕಿನ ತೊರವಿ ಗ್ರಾಮದ ಅಲ್ ಅಮೀನ್ ಮೆಡಿಕಲ್ ಕಾಲೇಜು ವೈದ್ಯ ವಿದ್ಯಾರ್ಥಿನಿ ತಷಾವುದ್ದ ಪಾರುಖಿ ಶೇಖ್ ವಿರುದ್ಧ ಪೊಲೀಸರು ಸುಮೊಟೊ ಕೇಸ್ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ ಮಾಡಿದ್ದ ವೈದ್ಯ ವಿದ್ಯಾರ್ಥಿನಿ ತನ್ನ ಇನ್ಸ್ಟಾಗ್ರಾಮ್ ಖಾತೆ hoodyyyyyyy ಯಿಂದ ಪಾಕ್ ಪರ ಪೊಸ್ಟ್ ಮಾಡಿ To my Pakistani Friends, People of IOJK, AJK. Avoid going near millitary, Govt Installation. If you are leaving close to 200KM border Radius. Pleaese move Inland. May Allah protect us all from India, Ameen ಎಂದು ಪಾಕ ಧ್ವಜ ಹಾಕಿ ಪೊಸ್ಟ್ ಮಾಡಿದ್ದಳು. ವಿಜಯ ಪೂರ ಗ್ರಾಮೀಣ ಪೊಲೀಸ್ ಠಾಣೆಯ ಗ್ರಾಮೀಣ ಪಿ.ಎಸ್.ಐ, ವಿನೋದ ದೊಡಮನಿ ಕೊಟ್ಟ ದೂರಿನ ಅನ್ವಯ ಕೇಸ್ ದಾಖಲಾಗಿದೆ.

ಪಿ.ಎಸ್.ಐ. ವಿನೋದ ದೊಡಮನಿ ಪೆಸ್ಬುಕ್ ನೊಡುತ್ತಿದ್ದಾಗ ವೀರು ಕಿಚ್ಚ ಇನ್ ಕರ್ನಾಟಕಾ ಇವರು ವಿಜಯಪೂರ ದಲ್ಲಿ ಪಾಕ್ ಪ್ರೇಮಿಗಳು ಅಂತಾ ಪೋಸ್ಟ್ ಹಾಕಿದ್ದರು. ವಿಜಯಪೂರ ಅಲ್‌ಅಮೀನ ಮೆಡಿಕಲ್ ಕಾಲೇಜದಲ್ಲಿ ಪಾಕ ಪ್ರೇಮಿ ಅಂತಾ ಪೋಸ್ಟ ಮಾಡಿದ್ದರು. ಇದನ್ನು ಗಮನಿಸಿದ ಪಿ.ಎಸ್.ಐ.ಯಿಂದ ಸುಮೊಟೊ ಕೇಸ್ ದಾಖಲಿಸಿದ್ದಾರೆ. ಬಿಎಸ್ಎನ್ 152 197 3(5) 9.60 2023 ರಡಿ ದೂರು ದಾಖಲಾಗಿದೆ. ದೂರು ದಾಖಲಾದ ಬಳಿಕ ವಿದ್ಯಾರ್ಥಿನಿ ಪೊಸ್ಟ್ ಡಿಲಿಟ್ ಮಾಡಿ ಕ್ಷಮೆಯಾಚಿಸಿದ್ದಾಳೆ.