Belagavi

ಸಂತಿಬಸ್ತವಾಡದಲ್ಲಿ ಧರ್ಮಗ್ರಂಥ ಸುಟ್ಟ ಪ್ರಕರಣ; ಕಿಡಿಗೇಡಿಗಳ ಬಂಧನಕ್ಕೆ ನೀಡಿದ 3 ದಿನಗಳ ಗಡುವು ಮುಕ್ತಾಯ…

Share

ಸಂತಿಬಸ್ತವಾಡ ಗ್ರಾಮದಲ್ಲಿನ ಮಸೀದಿಯಲ್ಲಿದ್ದ ಧರ್ಮಗ್ರಂಥವನ್ನು ಹೊರ ತಂದು ಸುಟ್ಟ ಕಿಡಿಗೇಡಿಗಳ ಬಂಧನಕ್ಕೆ ನೀಡಿದ ಮೂರು ದಿನಗಳ ಗಡುವು ಮುಗಿದ ಹಿನ್ನೆಲೆ ಇಂದು ಮತ್ತೇ ಮುಸ್ಲಿಂ ಸಮಾಜದಿಂದ ಬೆಳಗಾವಿಯಲ್ಲಿ ಬೃಹತ ಪ್ರತಿಭಟನೆಯನ್ನು ನಡೆಸಲಾಯಿತು.

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿನ ಮಸೀದಿನಿಂದ ಧರ್ಮಗ್ರಂಥಗಳನ್ನು ಹೊರತಂದು ಸುಟ್ಟ ಪ್ರಕರಣವನ್ನು ಖಂಡಿಸಿ ಮುಸ್ಲಿಂ ಸಮಾಜದಿಂದ ಘಟನೆಯಾದ ದಿನವೇ ಉಗ್ರ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ವೇಳೆ ನಗರ ಪೊಲೀಸ್ ಆಯುಕ್ತರು 3 ದಿನದೊಳಗೆ ಕಿಡಿಗೇಡಿಗಳನ್ನು ಬಂಧಿಸುವ ಭರವಸೆಯನ್ನು ನೀಡಲಾಗಿತ್ತು. ಆದರೇ ಇಂದಿಗೆ ಮೂರು ದಿನದ ಗಡುವು ಮುಗಿದ ಹಿನ್ನೆಲೆ ಇಂದು ಮತ್ತೇ ಮುಸ್ಲಿಂ ಸಮಾಜದವರು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಘೋಷಣೆಗಳನ್ನು ಕೂಗಿ ಪ್ರತಿಭಟನೆಯನ್ನು ನಡೆಸಿದರು.

ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಇನ್ನು ಕೆಲ ಜನರು ರಾಣಿ ಚೆನ್ನಮ್ಮ ವೃತ್ತದಲ್ಲೇ ಧರಣಿ ಕುಳಿತು ತಪ್ಪಿತಸ್ಥರ ಬಂಧನದ ವರೆಗೂ ಧರಣಿಯನ್ನು ಕೈಬಿಡಲ್ಲವೆಂದು ಪಟ್ಟು ಹಿಡಿದರು. ಈ ವೇಳೆ ಸಮಾಜದ ಪ್ರಮುಖರು ಅವರಿಗೆ ತಿಳಿಹೇಳಿ ಪೊಲೀಸರ ತನಿಖೆಗೆ ಸಹಕರಿಸಬೇಕೆಂದರು.

ಈ ವೇಳೆ ಮಾತನಾಡಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು ಸಂತಿಬಸ್ತವಾಡದಲ್ಲಿ ಧರ್ಮಗ್ರಂಥವನ್ನು ಸುಟ್ಟ ಘಟನೆ ಅಕ್ಷಮ್ಯ. ಬೆಳಗಾವಿ ಪೊಲೀಸ್ ಆಯುಕ್ತರು 7 ದಿನದೊಳಗೆ ಕಿಡಿಗೇಡಿಗಳನ್ನು ಬಂಧಿಸುವುದಾಗಿ ಭರವಸೆಯನ್ನು ನೀಡಿದೆ. ಮೊದಲೂ ಕಮಿಷ್ನರ್ ಮೂರು ದಿನದೊಳಗೆ ಕಿಡಿಗೇಡಿಗಳನ್ನು ಬಂಧಿಸುವುದಾಗಿ ತಿಳಿಸಿದ್ದರು. ಆದರೇ ಈ ಮೊದಲೂ ಸಂತಿಬಸ್ತವಾಡ ಗ್ರಾಮದಲ್ಲಿ ಈದ್ಗಾ ಗೋಡೆಯನ್ನು ಉರುಳಿಸಿದ ಆರೋಪಿಗಳನ್ನು ಬಂಧಿಸಿ ಕೋರ್ಟ್’ಗೆ ಹಾಜರುಪಡಿಸುವ ಕಾರ್ಯಾಚರಣೆಯಲ್ಲಿ ಅವರು ವ್ಯಸ್ಥವಾಗಿದ್ದರು. ಈಗಲೂ ಧರ್ಮಗ್ರಂಥವನ್ನು ಸುಟ್ಟ ಕಿಡಿಗೇಡಿಗಳ ಬಂಧನಕ್ಕೆ ಕಾರ್ಯಾಚರಣೆ ಜಾರಿಯಲ್ಲಿದೆ. ಈಗಾಗಲೇ ಕರ್ತವ್ಯಲೋಪವೆಸಗಿದೆ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಿದ್ದಾರೆ. ಶಾಂತಿಯುತವಾಗಿದ್ದು, ಪೊಲೀಸ್ ತನಿಖೆಗೆ ಸಹಕರಿಸಬೇಕೆಂದರು.

ಇನ್ನು ರಾಣಿ ಚೆನ್ನಮ್ಮ ವೃತ್ತದಲ್ಲಿ ಕಣ್ಣು ಹಾಯಿಸಿದತ್ತ ನಾಲ್ಕು ದಿಕ್ಕಿನಲ್ಲಿ ಜನಸಾಗರವೇ ಹರಿದು ಬಂದಿತ್ತು. ಈ ಹಿನ್ನೆಲೆ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ನೀಡಲಾಯಿತು. ಮುಂಜಾಗೃತಾ ಕ್ರಮವಾಗಿ ಪೊಲೀಸರು ಬೀಗಿ ಬಂದೋಬಸ್ತ್ ಏರ್ಪಡಿಸಿದ್ದರು. ಡ್ರೋಣ್ ಮೂಲಕವು ಹದ್ದಿನ ಕಣ್ಣು ಇಡಲಾಗಿತ್ತು

Tags:

error: Content is protected !!