ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಜಮೀನಿನಲ್ಲಿ ಮೇವು ತೆಗೆದುಕೊಂಡು ವಾಪಸ್ ಬರುವಾಗ ಸಿಡಿಲು ಬಡಿದು ಸ್ಥಳದಲ್ಲೇ ಹಿಟ್ಟಣಗಿ ಗ್ರಾಮದ ಗಂಗವ್ವ ಜೀರಗಿವಾಡ ಮತ್ತು ಕಲಾವತಿ ಜೀರಗಿವಾಡ ದಾರುಣವಾಗಿ ಸಾವಿಗಿಡಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
