BELAGAVI

ನ್ಯಾಯಾಲಯದ ಆದೇಶ ನೀಡಲು ಹೋದ ವಕೀಲರ ಮೇಲೆ ಮಾರಣಾಂತಿಕ ಹಲ್ಲೆಯ ಆರೋಪ…

Share

ಬ್ಯಾಂಕಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಜಪ್ತಿ ಆದೇಶ ಪ್ರತಿಯನ್ನು ನೀಡಲು ಹೋದ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬೆಳಗಾವಿ ಬಾರ್ ಅಸೋಸಿಯೇಷನ್’ನ ವತಿಯಿಂದ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.

ಇಂದು ಬೆಳಗಾವಿಯ ಪೊಲೀಸ್ ಆಯುಕ್ತರ ಕಾರ್ಯಾಲಯಕ್ಕೆ ಆಗಮಿಸಿದ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ ನೇತೃತ್ವದ ವಕೀಲರ ನಿಯೋಗವು, ನ್ಯಾಯಾಲಯದ ಆದೇಶವನ್ನು ನೀಡಲು ಹೋದ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತು.

ಈ ವೇಳೆ ಮಾತನಾಡಿದ ನ್ಯಾಯವಾದಿಗಳಾದ ಶ್ರೀಧರ ಕುಲಕರ್ಣಿ ಅವರು ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿದ ಕಬ್ಜಾ ಆದೇಶವನ್ನು ತೆಗೆದುಕೊಂಡು ಎಪಿಎಂಸಿ ಪೊಲೀಸ್ ಠಾಣೆಗೆ ಹೋದಾಗ ಎಪಿಎಂಸಿ ಪೊಲೀಸರು ಮುಂದಿನ ಕ್ರಮವನ್ನು ಕೈಗೊಳ್ಳದೇ ವಿಳಂಬ ನೀತಿ ತೋರಿದ್ದಲ್ಲದೇ ನ್ಯಾಯಾಧೀಶರ ಆದೇಶದ ಕುರಿತು ಮತ್ತು ಪೊಲೀಸ್ ಆಯುಕ್ತರ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಸುಮಾರು 4 ಗಂಟೆಗಳ ಕಾಲ ನ್ಯಾಯವಾದಿಗಳನ್ನು ಪ್ರತೀಕ್ಷೆಯಲ್ಲಿಟ್ಟಿದ್ದಾರೆ. ನ್ಯಾಯವಾದಿ ಬಳಿಯಲ್ಲಿದ್ದ ಮೊಬೈಲ್ ಕಸಿದುಕೊಂಡು ಮಾರಣಾಂತಿಕ ಹಲ್ಲೆಯನ್ನು ನಡೆಸಲಾಗಿದೆ. ನ್ಯಾಯವಾದಿಗಳಾಗಿರುವ ರಾಜ್ಯದ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಕೂಡ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಕೀಲರಿಗೆ ಸುರಕ್ಷತೆ ನೀಡಬೇಕೆಂದು ಬೆಳಗಾವಿ ಬಾರ್ ಅಸೋಸಿಯೇಷನ್’ನ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ ಹೇಳಿದರು.

ನ್ಯಾಯಾಲಯವು ನೀಡಿದ ಜಪ್ತಿ ಆದೇಶದ ಮಾಹಿತಿಯ ಪ್ರತಿಯನ್ನು ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಲು ಹಿಂದೇಟು ಹಾಕಲಾಗಿದೆ. ಮಧ್ಯಾನ್ಹದಿಂದ ರಾತ್ರಿಯಾದರೂ ಪ್ರತಿಯನ್ನು ಸ್ವೀಕರಿಸಿದೇ, ಅಸಡ್ಡೆ ತೋರಲಾಗಿದೆ. ಕಮಿಷ್ನರ್ ಅವರಿಗೆ ಕರೆ ಮಾಡುತ್ತಲೇ ಠಾಣೆಯ ಅಧಿಕಾರಿ ಅಸಮಾಧಾನಗೊಂಡು, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಮಿಷ್ನರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದು, ಕಮಿಷ್ನರ್ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾವಾರು ತನಿಖೆ ನಡೆಸಿ, ಅಮಾನತ್ತು ನಡೆಸುವ ಆದೇಶವನ್ನು ನೀಡಿದ್ದಾರೆ. ವಕೀಲರ ಮೇಲೆಯೇ ಈ ರೀತಿಯ ದುವರ್ತನೆ ತೋರುತ್ತಿರುವ ಇವರು ಸಾಮಾನ್ಯ ಜನರೊಂದಿಗೆ ಯಾವ ರೀತಿ ವರ್ತಿಸುತ್ತಿರಬೇಕೆಂದು ಹಲ್ಲೆಗೊಳಗಾದ ವಕೀಲರಾದ ಶ್ರೀಧರ ಕುಲಕರ್ಣಿ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಬಸವರಾಜ್ ಮುಗಳಿ, ಶೀತಲ್ ರಾಮಶೆಟ್ಟಿ, ಯಲ್ಲಪ್ಪ ದೀವಟೆ, ವಿಶ್ವನಾಥ ಸುಲ್ತಾನಪುರಿ, ಸುಮೀತಕುಮಾರ್ ಅಗಸಗಿ, ಈರಣ್ಣಾ ಪುಜೇಋ, ವಿನಾಯಕ ನಿಂಗನೂರೆ, ಸುರೇಶ್ ನಾಗನೂರಿ, ಅನೀಲ ಪಾಟೀಲ್. ಅಶ್ವಿನಿ ಹವಾಲ್’ದಾರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!